ಬುಧವಾರ, ಮಾರ್ಚ್ 3, 2021
30 °C

ಬಾಕ್ಸಿಂಗ್‌: ವೈಭವ್‌ ಚಾಂಪಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಪ್ರೊ ಬಾಕ್ಸರ್‌ ವೈಭವ್‌ ಯಾದವ್ ಅವರು ಡಬ್ಲ್ಯುಬಿಸಿ ಏಷ್ಯಾ ಸಿಲ್ವರ್‌ ವಾಲ್ಟರ್‌ವೇಟ್‌  ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಥಾಯ್ಲೆಂಡ್‌ನ ಪಟ್ಟಾಯಾನಲ್ಲಿ ಭಾನುವಾರ ರಾತ್ರಿ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅವರು ತವರಿನ ಬಾಕ್ಸರ್‌ ಫಾಹ್‌ಪೆಚ್‌ ಸಿಂಗ್ಮಾನಾಸ್ಸಕ್‌ ಅವರನ್ನು ಮಣಿಸಿದರು.

ಯಾದವ್‌, ಕಾಮನ್‌ವೆಲ್ತ್‌ ಗೇಮ್ಸ್ ಚಿನ್ನದ ಪದಕ ವಿಜೇತ ವಿಕಾಸ್‌ ಕ್ರಿಶನ್‌ ಅವರ ಸೋದರ ಸಂಬಂಧಿ. 

ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌ನ ಸಮ್ಮತಿಯ ಮೇರೆಗೆ ಏಷ್ಯನ್‌ ಬಾಕ್ಸಿಂಗ್‌ ಕೌನ್ಸಿಲ್‌ನಿಂದ ಈ ಟೂರ್ನಿ ಆಯೋಜಿಸಲ್ಪಟ್ಟಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು