ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಶೂಟಿಂಗ್ ತಂಡಕ್ಕೆ ಕ್ವಾರಂಟೈನ್ ಇಲ್ಲ: ನಾಳೆಯಿಂದ ಅಭ್ಯಾಸ

ಕ್ರೊವೇಷ್ಯಾದಿಂದ ನೇರವಾಗಿ ಟೋಕಿಯೊಗೆ ಪಯಣ
Last Updated 17 ಜುಲೈ 2021, 13:27 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಶೂಟರ್‌ಗಳಿಗೆ ಕ್ವಾರಂಟೈನ್ ಅಗತ್ಯವಿಲ್ಲ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮುಂದಿನ ಸೋಮವಾರ ನೇರವಾಗಿ ಅಭ್ಯಾಸ ಆರಂಭಿಸಲಿದೆ. ಶನಿವಾರ ಮುಂಜಾನೆ ಟೋಕಿಯೊ ತಲುಪಿರುವ ಶೂಟರ್‌ಗಳು ತಮಗೆ ಮೀಸಲಿರಿಸಿದ ಕೊಠಡಿಗಳಲ್ಲಿ ಉಳಿದುಕೊಂಡಿದ್ದಾರೆ.

ಟೋಕಿಯೊದ ವಾಯವ್ಯ ಭಾಗದಲ್ಲಿರುವ ಸೈತಮಾ ಪ್ರದೇಶದಲ್ಲಿರುವ ಅಸಾಕ ಶೂಟಿಂಗ್ ರೇಂಜ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ. 1964ರ ಒಲಿಂಪಿಕ್ಸ್ ಸಂದರ್ಭದಲ್ಲೂ ಶೂಟಿಂಗ್ ಇಲ್ಲೇ ನಡೆದಿತ್ತು.

‘ಕ್ರೊವೇಷ್ಯಾದಲ್ಲಿ ಅಭ್ಯಾಸ ನಡೆಸುತ್ತಿದ್ದ ಶೂಟರ್‌ಗಳು ನೇರವಾಗಿ ಇಲ್ಲಿಗೆ ಬಂದಿದ್ದಾರೆ. ಹೀಗಾಗಿ ಅವರು ಕ್ವಾರಂಟೈನ್‌ಗೆ ಒಳಗಾಗಬೇಕಾದ ಅಗತ್ಯವಿಲ್ಲ. ಎಲ್ಲ ಶೂಟರ್‌ಗಳು ಕ್ರೀಡಾಗ್ರಾಮದಲ್ಲಿದ್ದಾರೆ’ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯ (ಎನ್‌ಆರ್‌ಎಐ) ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದ್ದಾರೆ.

‘ನರಿತಾ ವಿಮಾನ ನಿಲ್ದಾಣದಲ್ಲಿ ಎಲ್ಲ ಪ್ರಕ್ರಿಯೆಗಳೂ ಸುಸೂತ್ರವಾಗಿ ನಡೆದವು. ಅಲ್ಲಿಂದ ಕ್ರೀಡಾಗ್ರಾಮಕ್ಕೆ ತಲುಪಿ ಕೊಠಡಿ ಪ್ರವೇಶಿಸಲು ಎಂಟು ತಾಸುಗಳು ಹಿಡಿಸಿದವು. ಯುರೋಪ್‌ನಿಂದ ಸುದೀರ್ಘ ‍ಪ್ರಯಾಣ ಮಾಡಿ ಶೂಟರ್‌ಗಳು ಬಂದಿದ್ದಾರೆ. ಹೀಗಾಗಿ ಸರಿಯಾದ ವಿಶ್ರಾಂತಿ ಪಡೆದ ನಂತರವಷ್ಟೇ ಅಭ್ಯಾಸ ಆರಂಭಿಸಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT