ಬುಧವಾರ, ಜೂನ್ 16, 2021
27 °C

ಬ್ಯಾಡ್ಮಿಂಟನ್‌: ಪ್ಯಾರಾಲಿಂಪಿಕ್ಸ್‌ಗೆ ಪಲಕ್–ಪಾರುಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಲಕ್ ಕೊಹ್ಲಿ ಹಾಗೂ ಪಾರುಲ್ ಪರಮಾರ್‌ ಅವರು ಶುಕ್ರವಾರ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಯರು ಎನಿಸಿಕೊಂಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಈ ಕುರಿತು ಇವರಿಬ್ಬರಿಗೆ ಮಾಹಿತಿ ರವಾನಿಸಿದೆ.

18 ವರ್ಷದ ಪಲಕ್ ಹಾಗೂ ಅನುಭವಿ ಆಟಗಾರ್ತಿ ಪಾರುಲ್ ಅವರಿಗೆ, ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಪ್ರಯಾಣ ನಿರ್ಬಂಧದ ಕಾರಣ ಸ್ಪ್ಯಾನಿಷ್ ಪ್ಯಾರಾ ಟೂರ್ನಿಯಲ್ಲಿ (ಮೇ 11ರಿಂದ 16ರವರೆಗೆ) ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಎಸ್‌ಎಲ್‌3–ಎಸ್‌ಯು5 ಮಹಿಳಾ ಡಬಲ್ಸ್ ವಿಭಾಗದಲ್ಲಿ ಈ ಜೋಡಿ ಅರ್ಹತೆ ಗಳಿಸಿದ್ದು, ಮೊದಲ ಬಾರಿ ಪ್ಯಾರಾಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸಿದೆ. 

ಪಲಕ್ ಅವರು ಟೋಕಿಯೊ ಟಿಕೆಟ್‌ ಗಳಿಸಿದ ವಿಶ್ವದ ಅತಿ ಕಿರಿಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.