ಭಾನುವಾರ, ಏಪ್ರಿಲ್ 2, 2023
24 °C
ಕಣದಲ್ಲಿ ಶರತ್‌, ಸತ್ಯನ್‌, ಮಣಿಕಾ

ಏಷ್ಯಾಕಪ್ ಟೇಬಲ್ ಟೆನಿಸ್‌: ಭಾರತೀಯರಿಗೆ ಕಠಿಣ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ದಿಗ್ಗಜ ಆಟಗಾರ ಅಚಂತ ಶರತ್ ಕಮಲ್ ಮತ್ತು ಜಿ.ಸತ್ಯನ್ ಅವರು ಬ್ಯಾಂಕಾಕ್‌ನಲ್ಲಿ ಗುರುವಾರ ಆರಂಭಬಾಗಲಿರುವ ಏಷ್ಯಾಕಪ್ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಮೊ‌ದಲ ಪಂದ್ಯಗಳಲ್ಲಿ ಕಠಿಣ ಸವಾ‍ಲು ಎದುರಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಶರತ್‌, ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಚುವಾಂಗ್‌ ಚಿಹ್ ಯುವಾನ್ ಅವರನ್ನು ಎದುರಿಸುವರು. ಚೀನಾ ಆಟಗಾರ ವಿಶ್ವ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿದ್ದಾರೆ.

39ನೇ ರ‍್ಯಾಂಕಿನ ಸತ್ಯನ್ ಅವರಿಗೆ ಮೊದಲ ಪಂದ್ಯದಲ್ಲಿ 26ನೇ ಕ್ರಮಾಂಕದ ಜಪಾನ್ ಆಟಗಾರ ಯೂಕಿಯಾ ಯುಡಾ ಸವಾಲು ಎದುರಾಗಿದೆ.

ಕಣದಲ್ಲಿರುವ ಭಾರತದ ಏಕೈಕ ಆಟಗಾರ್ತಿ ಮಣಿಕಾ ಬಾತ್ರಾ (44ನೇ ಕ್ರಮಾಂಕ) ಅವರು ಏಳನೇ ರ‍್ಯಾಂಕಿನ ಚೀನಾ ಆಟಗಾರ್ತಿ ಚೆನ್‌ ಷಿಂಗ್‌ಟಾಂಗ್‌ ವಿರುದ್ಧ ಸೆಣಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು