ಗುರುವಾರ , ಸೆಪ್ಟೆಂಬರ್ 23, 2021
27 °C

ಕೋವಿಡ್‌: 130 ಮಂದಿಗೆ ಟಿಟಿ ಆಟಗಾರರ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಪ್ರಮುಖ ಟೇಬಲ್‌ ಟೆನಿಸ್‌ ಆಟಗಾರರಾದ ಶರತ್‌ ಕಮಲ್‌ ಹಾಗೂ ಜಿ.ಸತ್ಯನ್‌ ಅವರು ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವವರಿಗೆ ನೀಡುತ್ತಿರುವ ನೆರವನ್ನು 130 ಮಂದಿಗೆ ವಿಸ್ತರಿಸಿದ್ದಾರೆ. ಸದ್ಯ ಅವರು ದಾನಿಗಳಿಂದ ₹ 13 ಲಕ್ಷ ಹಣ ಸಂಗ್ರಹಿಸಿದ್ದಾರೆ.

ಈ ಮೊದಲು ಅವರು ₹ 10 ಲಕ್ಷ ನೆರವು ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಹೆಚ್ಚಿನ ಹಣ ಸಂಗ್ರಹವಾದ ಹಿನ್ನೆಲೆಯಲ್ಲಿ ಇನ್ನಷ್ಟು ಆಟಗಾರರಿಗೆ ನೆರವು ನೀಡಲಿದ್ದಾರೆ. ಬಿಕ್ಕಟ್ಟಿನಲ್ಲಿರುವ ಆಟಗಾರರು ಒಂದು ಬಾರಿಯ ಆರ್ಥಿಕ ನೆರವಾಗಿ ₹ 10,000 ಸ್ವೀಕರಿಸಲಿದ್ದಾರೆ. ಹಿರಿಯ ಆಟಗಾರ್ತಿ ನೇಹಾ ಅಗರವಾಲ್‌ ಕೂಡ ಶರತ್‌ ಹಾಗೂ ಸತ್ಯನ್‌ ಅವರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

‘ನಾವು ಆರಂಭದಲ್ಲಿ 100 ಜನರಿಗೆ ನೆರವಾಗಲು ನಿರ್ಧರಿಸಿದ್ದೆವು. ಆದರೆ ನಮ್ಮ ಕಾರ್ಯಕ್ಕೆ ಹೆಚ್ಚಿನ ಸ್ಪಂದನೆ ವ್ಯಕ್ತವಾದ ಕಾರಣ ಇನ್ನೂ 30 ಆಟಗಾರರಿಗೆ ಧನಸಹಾಯ ನೀಡುತ್ತಿದ್ದೇವೆ. ಭಾನುವಾರದವರೆಗೆ ಹಣವನ್ನು ಸ್ವೀಕರಿಸುತ್ತೇವೆ. ಬಳಿಕ ಎಷ್ಟು ಆಟಗಾರರಿಗೆ ಹಂಚಬೇಕೆಂದು ತೀರ್ಮಾನಿಸುತ್ತೇವೆ’ ಎಂದು ಶರತ್‌ ಹೇಳಿದ್ದಾರೆ.

ಶರತ್‌ ಹಾಗೂ ಸತ್ಯನ್‌ ಆರಂಭದಲ್ಲಿ ಚೆನ್ನೈನ ಸ್ಥಳೀಯ ಎಂಟು ಕೋಚ್‌ಗಳಿಗೆ ಮಾತ್ರ ನೆರವು ನೀಡಲು ಬಯಸಿದ್ದರು. ಆದರೆ ನೇಹಾ ಅಗರವಾಲ್‌ ಹಾಗೂ ಅಲ್ಟಿಮೇಟ್‌ ಟೇಬಲ್‌ ಟೆನಿಸ್(ಯುಟಿಟಿ)‌ ಲೀಗ್‌ನ ಬೆಂಬಲ ದೊರಕಿದ ಬಳಿಕ ಹೆಚ್ಚು ನಿಧಿ ಸಂಗ್ರಹವಾಗಿ ಹೆಚ್ಚು ಮಂದಿಗೆ ಹಂಚಲು ನೆರವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು