ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್‌ ಫೈನಲ್‌: ಸಿಂಧು ಕೈತಪ್ಪಿದ ಪ್ರಶಸ್ತಿ

Last Updated 21 ಜುಲೈ 2019, 17:28 IST
ಅಕ್ಷರ ಗಾತ್ರ

ಜಕಾರ್ತಾ (ಪಿಟಿಐ): ಏಳು ತಿಂಗಳ ಪ್ರಶಸ್ತಿ ಬರವನ್ನು ನೀಗಿಸುವ ಭಾರತದ ಸ್ಟಾರ್‌ ಆಟಗಾರ್ತಿ ಪಿ.ವಿ.ಸಿಂಧು ಅವರ ಕನಸು ಈ ಬಾರಿಯೂ ಕೈಗೂಡಲಿಲ್ಲ.

ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಸಿಂಧು, ಭಾನುವಾರ ನಡೆದ ಇಂಡೊ ನೇಷ್ಯಾ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಜಪಾನಿನ ಅಕಾನೆ ಯಮಗುಚಿ ಎದುರು ಮಣಿದರು.

ನಾಲ್ಕನೇ ಶ್ರೇಯಾಂಕದ ಯಮಗುಚಿ 51 ನಿಮಿಷಗಳವರೆಗೆ ನಡೆದ ಫೈನಲ್‌ ನಲ್ಲಿ ಸಿಂಧು ವಿರುದ್ಧ 21–15, 21–16 ರಲ್ಲಿ ಜಯಗಳಿಸಿದರು. ವರ್ಷದ ಮೊದಲ ಫೈನಲ್‌ ಆಡಿದ ಸಿಂಧು ಒತ್ತಡದಲ್ಲಿದ್ದಂತೆ ಕಂಡುಬಂದರು ಮಾತ್ರವಲ್ಲ, ಜಪಾನ್‌ ಆಟಗಾರ್ತಿಯ ಮಟ್ಟಕ್ಕೆ ಸಮನಾಗಿ ಆಡಿ ದಂತೆ ಕಾಣಲಿಲ್ಲ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದೇ ಸಿಂಧು ಅವರ ಕೊನೆಯ ಪ್ರಮುಖ ಯಶಸ್ಸು ಆಗಿತ್ತು.

ಇವರಿಬ್ಬರು 15 ಬಾರಿ ಮುಖಾಮುಖಿಯಾಗಿದ್ದು, ಸಿಂಧು ಅವರಿಗೆ ಭಾನುವಾರದ್ದು ಐದನೇ ಸೋಲು ಎನಿಸಿತು. ಕಳೆದ ವರ್ಷ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್ಸ್‌ನ ಸೆಮಿಫೈನಲ್‌ನಲ್ಲಿ ಸಿಂಧು, ಇದೇ ಎದುರಾಳಿಗೆ ಕೊನೆಯ ಬಾರಿ ಸೋತಿದ್ದರು. ಸಿಂಧು ರನ್ನರ್‌ ಅಪ್‌ ಸರಣಿಯೂ ಮುಂದುವರಿಯಿತು. ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಥಾಯ್ಲೆಂಡ್‌ ಓಪನ್‌, ಇಂಡಿಯಾ ಓಪನ್‌ ನಲ್ಲೂ ಅವರು ರನ್ನರ್ ಅಪ್‌ ಆಗಿದ್ದರು.

22 ವರ್ಷದ ಯಮಗುಚಿ ವರ್ಷದ ಮೂರನೇ ಪ್ರಶಸ್ತಿ ಗೆದ್ದುಕೊಂಡಂತಾಯಿತು. ಜರ್ಮನ್‌ ಓಪನ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲೂ ಅವರು ಟ್ರೋಫಿ ಹಿಡಿದಿದ್ದರು. ಈ ಟೂರ್ನಿಗೆ ಮೊದಲು ಸಿಂಧು, ಈ ವರ್ಷ ಸಿಂಗಪುರ ಓಪನ್‌ ಮತ್ತು ಇಂಡಿಯಾ ಓಪನ್‌ ಟೂರ್ನಿಯ ಸೆಮಿಫೈನಲ್‌ ತಲುಪಿದ್ದರು.

ಮೊದಲ ಗೇಮ್‌ನ ಮೊದಲ ಅರ್ಧಭಾಗ ಮುನ್ನಡೆಗಾಗಿ ಪೈಪೋಟಿ ಕಂಡುಬಂದಿತ್ತು. 13–14 ಹಿನ್ನಡೆ ಯಿಂದ ಚೇತರಿಸಿಕೊಂಡ ನಂತರ ಯಮಗುಚಿ ಪೂರ್ಣ ಮೇಲುಗೈ ಸಾಧಿಸಿದರು. ಸಿಂಧು ಅವರ ದೀರ್ಘ, ಬ್ಯಾಕ್‌ಹ್ಯಾಂಡ್‌ ಕಾರ್ನರ್‌ ಹೊಡೆತವನ್ನು ನಿಭಾಯಿಸಿದ ಅವರು 16–14 ಮುನ್ನಡೆಗೇರಿದರು. ನಂತರ ಗೇಮ್‌ ಹಿಡಿತಕ್ಕೆ ಪಡೆಯಲು ಕಷ್ಟವಾಗಲಿಲ್ಲ.

ಎರಡನೇ ಗೇಮ್‌ನಲ್ಲೂ ಜಪಾನ್‌ನ ಆಟಗಾರ್ತಿ ಹಿಡಿತ ಮುಂದುವರಿಸಿದರು. ಅಕಾನೆ 15–11ರಿಂದ ಮುಂದಿದ್ದಾಗ ಇಬ್ಬರ ನಡುವೆ ದೀರ್ಘ ರ‍್ಯಾಲಿ ನಡೆದಿದ್ದು ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT