ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್ ಥ್ರೋ: ಪೂನಂ ರಾಣಿಗೆ ಚಿನ್ನ

ಮಂಗಳೂರು ವಿಶ್ವವಿದ್ಯಾಲಯ ಅಥ್ಲೀಟ್‍ಗಳ ಮೇಲುಗೈ
Last Updated 26 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಪೂನಂ ರಾಣಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನ ಮಹಿಳೆಯರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ದಾಖಲೆ ಮಾಡಿದರು.

ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ಕೂಟದಲ್ಲಿ ಸೋಮ ವಾರ ಒಟ್ಟು ಮೂರು ನೂತನ ದಾಖಲೆ ಗಳಾದವು. ಮಂಗಳೂರು ವಿಶ್ವವಿದ್ಯಾಲಯ ಎರಡು ಚಿನ್ನ, ಮೂರು ಬೆಳ್ಳಿ ಪದಕ ಗೆದ್ದಿದೆ.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಗಳ ಆಶ್ರಯದಲ್ಲಿ ನಡೆಯುತ್ತಿರುವ ಈ ಕೂಟದ ಜಾವೆಲಿನ್ ಥ್ರೋನಲ್ಲಿ ಪೂನಂ ರಾಣಿ 53.26 ಮೀಟರ್ಸ್‌ ದೂರ ಎಸೆದ ಸಾಧನೆ ಮಾಡಿದರು. 2013ರಲ್ಲಿ ಮೀರಟ್ ವಿಶ್ವವಿದ್ಯಾಲಯದ ಅನುರಾಣಿ (ದೂರ: 52.64 ಮೀಟರ್) ಆವರು ಮಾಡಿದ್ದ ದಾಖಲೆಯನ್ನು ಪೂನಂ ಮೀರಿನಿಂತರು.

ಫಲಿತಾಂಶಗಳು: ಪುರುಷರು: 400 ಮೀಟರ್ಸ್ ಓಟ: ಆರ್. ರಾಜೇಶ್ (ಮದ್ರಾಸ್ ವಿವಿ: ಸಮಯ: 47.68 ಸೆಕೆಂಡು)-1, ರೋಹನ್ ಡಿ. ಕುಮಾರ್ (ಮಂಗಳೂರು ವಿವಿ)-2, ಕದಂ ರಾಹುಲ್ (ಮುಂಬೈ ವಿವಿ)-3. ಟ್ರಿಪಲ್ ಜಂಪ್: ಜೇಷಾ ಪ್ರದೀ (ಮುಂಬೈ ವಿವಿ: ನೂತನ ದಾಖಲೆ; 16.36 ಮೀಟರ್ಸ್. ಹಳೆಯದು; ಮೋಹನ್, ಮಂಗಳೂರು ವಿವಿ, 16.05 ಮೀ)-1. ಪ್ರವೀಣ್ (ಮಂಗಳೂರು ವಿವಿ)-2, ಜೆ. ಕಿರುಬಾ (ಅಣ್ಣ ವಿವಿ)-3. ಡಿಸ್ಕಸ್ ಥ್ರೋ: ಕೀರ್ತಿಕುಮಾರ್ ಎಸ್. ಬೇನಕೆ: (ಶಿವಾಜಿ ವಿವಿ: 52.59 ಮೀಟರ್ಸ್)-1, ವಣಂ ಶರ್ಮಾ: (ಮಂಗಳೂರು ವಿವಿ)-2, ಪರಮಜಿತ್: (ಕಳಿಂಗ ವಿವಿ)- 3. ಡೆಕಥ್ಲಾನ್: ಕೃಷ್ಣಕುಮಾರ್ (ಮಂಗಳೂರು ವಿವಿ: ನೂತನ ದಾಖಲೆ– 6906 ಪಾಯಿಂಟ್ಸ್‌; ಹಳೆಯದು; ಭಾರತೀಂದ್ರ ಸಿಂಗ್ 6877ಪಾ)-1, ವಿಕಾಸ್ ಕೌಶಿಕ್ ಪಾಯಿಂಟ್ (ಕುರುಕ್ಷೇತ್ರ ವಿವಿ)-2, ಅನುಜ್ ಸಾಂಘವಾನ್ (ಪಂಜಾಬ್ ವಿವಿ ಪಟಿಯಾಲ್)-3.

ಮಹಿಳೆಯರು: 400 ಮೀಟರ್ಸ್: ಶಾಲಿನಿ (ಮಹಾತ್ಮ ಗಾಂಧಿ ವಿವಿ; ಕಾಲ: 54.21 ಸೆಕೆಂಡು)-1, ಜರೀನಾ ಜೋಸೆಫ್ (ಮಹಾತ್ಮ ಗಾಂಧಿ ವಿವಿ)-2, ಆರ್. ವಿದ್ಯಾ (ಭಾರತೀರ್ ವಿವಿ)- 3.

20 ಕಿ.ಮೀ. ನಡಿಗೆ: ರವೀನಾ (ಮಹರ್ಷಿ ದಯಾನಂದ ವಿವಿ: ಕಾಲ: 1 ತಾಸು 43 ನಿ, 58.64 ಸೆ)-1, ಸೋನಲ್ ಸುಖ್ವಾಲ್ (ಮೋಹನ್ ಲಾಲ್ ವಿವಿ)-2, ಕೆ.ಎಂ. ಪ್ರಿಯಾಂಕಾ (ಮಹಾತ್ಮ ಗಾಂಧಿ ವಿವಿ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT