ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೀಟ್‌ಗಳಿಗೆ ಲಸಿಕೆ: ಫೆಡರೇಷನ್‌ಗಳಿಂದ ಮಾಹಿತಿ ಕೇಳಿದ ಭಾರತ ಒಲಿಂಪಿಕ್ ಸಂಸ್ಥೆ

Last Updated 26 ಮೇ 2021, 13:22 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ತೆರಳಲು ಸಿದ್ಧರಾಗಿರುವ ಎಷ್ಟು ಅಥ್ಲೀಟ್‌ಗಳು ಮತ್ತು ಅಧಿಕಾರಿಗಳು ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ ಎಂಬುದರ ಕುರಿತು ವಿವರ ನೀಡುವಂತೆ ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ರಾಷ್ಟ್ರೀಯ ಫೆಡರೇಷನ್‌ಗಳನ್ನು ಸೂಚಿಸಿದೆ.

ಅಥ್ಲೀಟ್‌ಗಳು ಲಸಿಕೆ ಪಡೆದುಕೊಂಡ ಮಾಹಿತಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಸಲ್ಲಿಸಬೇಕಾಗಿದೆಯೆಂದು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ಭಾರತದ 90ಕ್ಕೂ ಹೆಚ್ಚು ಕ್ರೀಡಾಪಟುಗಳು ಇದುವೆರೆಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಲಸಿಕೆ ಪಡೆದ ಅಥ್ಲೀಟ್‌ಗಳ ಕುರಿತು ಎಂಟು ಪ್ರಶ್ನೆಗಳಿಗೆ ಉತ್ತರಿಸುವಂತೆ ಐಒಎ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಸೂಚಿಸಿದೆ. ಲಸಿಕೆ ತೆಗೆದುಕೊಂಡಿರುವ ಅಥ್ಲೀಟ್‌ಗಳು ಮತ್ತು ಅಧಿಕಾರಿಗಳ ಸಂಖ್ಯೆ, ಮೊದಲ ಡೋಸ್‌ ಮತ್ತು ಎರಡನೇ ಡೋಸ್ ಪಡೆದ ದಿನಗಳು ಮತ್ತು ಯಾವ ಲಸಿಕೆ ಎಂಬುದರ ಕುರಿತು ವಿವರ ನೀಡುವಂತೆ ಕೇಳಿದೆ.

ಟೋಕಿಯೊ ಕೂಟಕ್ಕೆ ತೆರಳುವ ಮೊದಲು ಕೋವಿಡ್ ತಡೆ ನಿಯಮಾವಳಿಗಳ ಕುರಿತು ಅಥ್ಲೀಟ್‌ಗಳಿಗೆ ಅರಿವು ಮೂಡಿಸುವಂತೆಯೂ ಐಒಎ ಫೆಡರೇಷನ್‌ಗಳಿಗೆ ಸೂಚನೆ ನೀಡಿದೆ.

ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿದವರು ಸೇರಿದಂತೆ ಒಟ್ಟು 148 ಅಥ್ಲೀಟ್‌ಗಳು ಕೋವಿಡ್‌ ಲಸಿಕೆಯ ಮೊದಲ ಡೋಸ್ ‍ಪಡೆದಿದ್ದಾರೆ ಎಂದು ಐಒಎ ಇತ್ತೀಚೆಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT