ಶನಿವಾರ, ನವೆಂಬರ್ 23, 2019
17 °C

ಇಶಾ ರಾಜ್ಯದ ಮೊದಲ ಅಂತರರಾಷ್ಟ್ರೀಯ ಮಾಸ್ಟರ್

Published:
Updated:
Prajavani

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಚೆಸ್ ಆಟಗಾರ್ತಿ ಇಶಾ ಶರ್ಮಾ, ಮಂಗಳವಾರ ಅಂತರರಾಷ್ಟ್ರೀಯ ಮಾಸ್ಟರ್ (ಐಎಂ) ಆದರು. ಈ ಮೂಲಕ ರಾಜ್ಯದ ಮೊದಲ ಮಹಿಳಾ ಐಎಂ ಎಸಿಕೊಂಡರು.

ಹಂಗರಿಯ ಬೆಲಾಟೊನೆಲಿಯಲ್ಲಿ ನಡೆದ ‘ಸಮ್ಮರ್ ಎಂಡ್ ಬಲಾಟಾನ್ ಐಎಂ ಟೂರ್ನಿ’ಯಲ್ಲಿ ಅವರು ಐಎಂ ನಾರ್ಮ್ ಗಳಿಸಿಕೊಂಡರು. ಈ ಟೂರ್ನಿಯಲ್ಲಿ 2186 ರೇಟಿಂಗ್ ಹೊಂದಿರುವ ಸ್ಲೊವಾಕಿಯಾದ ಡೇವಿಡ್ ಮುರ್ಕೊ, ರೇಟಿಂಗ್‌ನ ಬೆಲ್ಜಿಯಂನ ಲೆನರ್ಟ್ಸ್ ಲೆನರ್ಟ್‌ (2341) ಮತ್ತು ಇಂಗ್ಲೆಂಡ್‌ನ ಇಯೆಲ್ ಮಾರ್ಕ್ (2185) ಎದುರು ಜಯ ಗಳಿಸಿದರು.

ಹಂಗರಿಯ ಹಾಟ್ ಮಿನ್‌ (2388), ಸ್ಲೊವಾಕಿಯಾದ ಸುತಾ ಆ್ಯಂಡ್ರಾಜ್ (2268) ಹಾಗೂ ಹಂಗರಿಯ ಸಾತಿ ಒಲಿವರ್ (2223) ಎದುರು ಇಶಾ ಡ್ರಾ ಸಾಧಿಸಿದರು. ಮೊದಲ ಐಎಂ ನಾರ್ಮ್‌ ಅನ್ನು 2017ರ ಶಾರ್ಜಾ ಮಾಸ್ಟರ್ಸ್‌ನಲ್ಲಿ, ಎರಡನೇ ನಾರ್ಮ್‌ ಅನ್ನು ಕಳೆದ ವರ್ಷ ಟರ್ಕಿಯಲ್ಲಿ ನಡೆದ ವಿಶ್ವ ಜೂನಿಯರ್ಸ್‌ ಟೂರ್ನಿಯಲ್ಲಿ ಗಳಿಸಿದ್ದರು.

ಪ್ರತಿಕ್ರಿಯಿಸಿ (+)