ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ: ದಾಖಲೆಯೊಂದಿಗೆ ಚಿನ್ನ ಗೆದ್ದ ಜೈನ್ ವಿವಿಯ ಶಿವ ಶ್ರೀಧರ್

Last Updated 25 ಏಪ್ರಿಲ್ 2022, 6:52 IST
ಅಕ್ಷರ ಗಾತ್ರ

ಬೆಂಗಳೂರು: ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟದ 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಜೈನ್ ವಿವಿಯ ಶಿವ ಶ್ರೀಧರ್ ದಾಖಲೆಯೊಂದಿಗೆ ಚಿನ್ನ ಗೆದ್ದರು.‌ ಜೈನ್ ವಿವಿ ಆವರಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಅವರು 2 ನಿಮಿಷ 5.43 ಸೆಕೆಂಡುಗಳಲ್ಲಿ‌ ಗುರಿ‌ ಮುಟ್ಟಿದರು.

400 ಮೀಟರ್ಸ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ವಿ.ವರ್ಷಾ ಚಿನ್ನದ ಪದಕ ಗಳಿಸಿದರು. ಅವರು 4 ನಿಮಿಷ, 59.63 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಈಜಿನಲ್ಲಿ ಮೊದಲ ಚಿನ್ನ ಪುಣೆಯ ಸಾವಿತ್ರಿಬಾಯಿ ಫುಲೆ ವಿವಿಯ ಶುಭಂ ದೈಗುಡೆ ಅವರ ಪಾಲಾಯಿತು.‌ ಪುರುಷರ 400 ಮೀ ಫ್ರೀಸ್ಟೈಲ್ ನಲ್ಲಿ ಅವರು 4 ನಿಮಿಷ 27.67 ಸೆಕೆಂಡುಗಳ ಸಾಧನೆ‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT