ಶುಕ್ರವಾರ, ಏಪ್ರಿಲ್ 23, 2021
24 °C
ಬಲ್ಗೇರಿಯಾ: ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿ

ಸ್ಟ್ರಾಂಡ್‌ಜಾ ಬಾಕ್ಸಿಂಗ್ ಟೂರ್ನಿ: ಕಿಜೈಬಿಗೆ ಆಘಾತ ನೀಡಿದ ಜ್ಯೋತಿ ಗುಲಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಜ್ಯೋತಿ ಗುಲಿಯಾ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್‌, ಕಜಕಸ್ತಾನದ ನಜಿಮ್‌ ಕಿಜೈಬಿ ಅವರಿಗೆ ಆಘಾತ ನೀಡಿ ಸ್ಟ್ರಾಂಡ್‌ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತದ ಮೂವರು ಬಾಕ್ಸರ್‌ಗಳು ಎರಡನೇ ಸುತ್ತಿನಲ್ಲೇ ಸೋತು ನಿರ್ಗಮಿಸಿದರು.

2017ರಲ್ಲಿ ವಿಶ್ವ ಯೂತ್ ಚಾಂಪಿಯನ್ ಆಗಿದ್ದ ಜ್ಯೋತಿ, 51 ಕೆಜಿ ವಿಭಾಗದ ಬೌಟ್‌ನಲ್ಲಿ 3–2ರಿಂದ ಕಿಜೈಬಿ ಅವರನ್ನು ಪರಾಭವಗೊಳಿಸಿದರು. 2014 ಹಾಗೂ 2016ರಲ್ಲಿ ಕಿಜೈಬಿ ಸೀನಿಯರ್ ವಿಭಾಗದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು.

ಹರಿಯಾಣದ ಜ್ಯೋತಿ 2019ರ ರಾಷ್ಟ್ರೀಯ ಚಾಂಪಿಯನ್ ಕೂಡ ಹೌದು. ಎಂಟರಘಟ್ಟದ ಬೌಟ್‌ನಲ್ಲಿ ಅವರು ರುಮೇನಿಯಾದ ಪೆರಿಜೊಸ್‌ ಲ್ಯಾಕ್ರಾಮಿಯೊರಾ ಅವರನ್ನು ಎದುರಿಸಲಿದ್ದಾರೆ.

ಪುರುಷರ ವಿಭಾಗದಲ್ಲಿ ಭಾರತದ ಬಾಕ್ಸರ್‌ಗಳು ನಿರಾಸೆ ಮೂಡಿಸಿದರು. ನವೀನ್ ಕುಮಾರ್‌ (91 ಕೆಜಿ) 0–5ರಿಂದ ಫ್ರಾನ್ಸ್‌ನ ವಿಲ್‌ಫ್ರೆಡ್‌ ಫ್ಲಾರೆಂಟಿನ್ ಎದುರು, ಅಂಕಿತ್ ಖತಾನ (75 ಕೆಜಿ) 2–3ರಿಂದ ಬೆಲಾರಸ್‌ನ ವಿಕ್ಟರ್‌ ಜಿಯಾಶ್ಕೆವಿಚ್‌ ಎದುರು ಎಡವಿದರು. 81 ಕೆಜಿ ಲೈಟ್ ಹೆವಿವೇಟ್ ವಿಭಾಗದಲ್ಲಿ ಸಚಿನ್ ಕುಮಾರ್ 0–5ರಿಂದ ಅರ್ಮೇನಿಯಾದ ಗೊರ್‌ ನೆರ್ಸೆಸ್ಯಾನ್ ವಿರುದ್ಧ ಸೋಲು ಅನುಭವಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು