ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಸ್‌– ಪೈರೇಟ್ಸ್‌ ಪಂದ್ಯ ‘ಟೈ’

ಪ್ರೊ ಕಬಡ್ಡಿ: ಮಿಂಚಿದ ಭರತ್‌, ರೋಹಿತ್‌
Last Updated 23 ಅಕ್ಟೋಬರ್ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಲ್ಲಿ ಹಿನ್ನಡೆ ಎದುರಾದರೂ ಮರುಹೋರಾಟ ನಡೆಸಿದ ಬೆಂಗಳೂರು ಬುಲ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ ಜತೆ ‘ಟೈ’ ಸಾಧಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯ 31–31 ಪಾಯಿಂಟ್‌ಗಳ ಸಮಬಲದಲ್ಲಿ ಕೊನೆಗೊಂಡಿತು. ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದ ಪ್ರಥಮಾರ್ಧದಲ್ಲಿ ಪೈರೇಟ್ಸ್‌ 19–10 ರಲ್ಲಿ ಮುನ್ನಡೆಯಲ್ಲಿತ್ತು.

ಪೈರೇಟ್ಸ್‌ ತಂಡದ ರೋಹಿತ್‌ ಗುಲಿಯಾ (8) ಮತ್ತು ಸಚಿನ್‌ (6) ಅವರು ಆರಂಭದಲ್ಲಿ ಮೇಲಿಂದ ಮೇಲೆ ಪಾಯಿಂಟ್ಸ್‌ ಕಲೆಹಾಕಿ ಬುಲ್ಸ್‌ ತಂಡದ ಮೇಲೆ ಒತ್ತಡ ಹೇರಿದರು. ಇವರು ರೇಡಿಂಗ್‌ನಲ್ಲಿ ಹೆಚ್ಚಿನ ಪಾಯಿಂಟ್ಸ್‌ ಕಲೆಹಾಕಿದರು.

ದ್ವಿತೀಯಾರ್ಧದಲ್ಲಿ ಬುಲ್ಸ್‌ ಪುಟಿದೆದ್ದು ನಿಂತಿತು. ಭರತ್ ಅವರು 11 ಪಾಯಿಂಟ್ಸ್‌ ಸಂಗ್ರಹಿಸಿ ಮರುಹೋರಾಟದ ನೇತೃತ್ವ ವಹಿಸಿದರು. ಅವರಿಗೆ ತಕ್ಕ ಸಾಥ್‌ ನೀಡಿದ ನೀರಜ್‌ ನರ್ವಾಲ್‌ ನಾಲ್ಕು ಪಾಯಿಂಟ್ಸ್‌ ತಂದಿತ್ತರು.

ವಿಕಾಸ್‌ ಖಂಡೋಲ, ಮಹೇಂದರ್‌ ಸಿಂಗ್ ಮತ್ತು ಸೌರಭ್‌ ತಲಾ ಮೂರು ಪಾಯಿಂಟ್ಸ್‌ ಗಳಿಸಿದರು. ಏಳು ಪಂದ್ಯಗಳಿಂದ 24 ಪಾಯಿಂಟ್ಸ್‌ ಸಂಗ್ರಹಿಸಿರುವ ಬುಲ್ಸ್‌, ಮೂರನೇ ಸ್ಥಾನದಲ್ಲಿದೆ.

ಇನ್ನೊಂದು ಪಂದ್ಯದಲ್ಲಿ ಯು.ಪಿ ಯೋಧಾಸ್‌ 41–24 ಪಾಯಿಂಟ್ಸ್‌ಗಳಿಂದ ತಮಿಳ್‌ ತಲೈವಾಸ್ ತಂಡವನ್ನು ಮಣಿಸಿತು.

ಮಂಗಳವಾರದ ಪಂದ್ಯಗಳು

ಪುಣೇರಿ ಪಲ್ಟನ್‌– ಜೈಪುರ ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 7.30)

ತೆಲುಗು ಟೈಟನ್ಸ್‌– ಹರಿಯಾಣ ಸ್ಟೀಲ್ಸ್‌ (ರಾತ್ರಿ 8.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT