ಶನಿವಾರ, ಸೆಪ್ಟೆಂಬರ್ 18, 2021
30 °C

ಮಳೆಯಿಂದಾಗಿ ಪದಕದ ಆಸೆ ಕಮರಿತು: ಕಮಲ್‌ಪ್ರೀತ್‌ ಕುಟುಂಬದ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ‘ದೇಶಕ್ಕಾಗಿ ಪದಕ ಗೆಲ್ಲಲು ಕಮಲ್‌ಪ್ರೀತ್‌ ಶಕ್ತಿಮೀರಿ ಪ್ರಯತ್ನಿಸಿದಳು. ಡಿಸ್ಕಸ್‌ ಥ್ರೋ ಸ್ಪರ್ಧೆಯ ವೇಳೆ ಮಳೆ ಸುರಿದಿದ್ದರಿಂದ ಲಯ ಕಂಡುಕೊಳ್ಳಲು ಆಗಲಿಲ್ಲ. ಹೀಗಾಗಿ ಪದಕದ ಕನಸು ಕಮರಿತು’ ಎಂದು ಕಮಲ್‌ಪ್ರೀತ್‌ ಕುಟುಂಬದವರು ಪ್ರತಿಕ್ರಿಯಿಸಿದ್ದಾರೆ.

ಪಂಜಾಬ್‌ನ ಮುಕ್ತಸರ್‌ ಜಿಲ್ಲೆಯ ಖಬರ್‌ವಾಲಾ ಗ್ರಾಮದವರಾದ ಕಮಲ್‌ಪ್ರೀತ್‌, ಫೈನಲ್‌ನ ಮೂರನೇ ಪ್ರಯತ್ನದಲ್ಲಿ 63.70 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದಿದ್ದರು. ಇದರೊಂದಿಗೆ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕೃಷ್ಣಾ ಪುನಿಯಾ (63.62) ಮಾಡಿದ್ದ ಸಾಧನೆ ಮೀರಿದ್ದರು.  

ಕಮಲ್‌ಪ್ರೀತ್‌ ಸೋಮವಾರ ಫೈನಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದುದ್ದರಿಂದ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ಮನೆಯವರೆಲ್ಲಾ ಟಿ.ವಿ.ಎದುರು ಕುಳಿತು ಕುಟುಂಬದ ಕುಡಿಯ ಪ್ರದರ್ಶನ ಕಣ್ತುಂಬಿಕೊಂಡರು. ಅವರ ತಾಯಿ ರಾಜಿಂದರ್‌ ಕೌರ್‌ ಮಗಳು ಚಿನ್ನದೊಂದಿಗೆ ತವರಿಗೆ ಮರಳಲಿ ಎಂದು ಬೆಳಿಗ್ಗೆಯಿಂದಲೇ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ವಿಶೇಷ ಪೂಜೆಯನ್ನು ಮಾಡಿದ್ದರು.

‘ಫೈನಲ್‌ನಲ್ಲಿ ಕಮಲ್‌ಪ್ರೀತ್‌ ಕೊಂಚ ಒತ್ತಡಕ್ಕೆ ಒಳಗಾದಂತೆ ಕಂಡಳು. ಆಕೆಯ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದಾಗ ಶ್ರೇಷ್ಠ ಸಾಮರ್ಥ್ಯ ತೋರಿ ದೇಶಕ್ಕೆ ಪದಕ ಗೆದ್ದುಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಳು’ ಎಂದು ರಾಜಿಂದರ್‌ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು