ಶುಕ್ರವಾರ, ಮೇ 20, 2022
24 °C

ಕಂಬಳ: ವಿಶ್ವನಾಥ ಬೈಂದೂರು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ್ಕಿ: ಇಲ್ಲಿಗೆ ಸಮೀಪದ ಐಕಳದಲ್ಲಿ ನಡೆದ ಕಾಂತಬಾರೆ– ಬೂದಬಾರೆ ಕಂಬಳದಲ್ಲಿ ಶನಿವಾರ ರಾತ್ರಿ ವಿಶ್ವನಾಥ ಬೈಂದೂರು 100 ಮೀಟರ್‌ ಅಂತರವನ್ನು 9.15 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದರು.

ಈ ಹಿಂದೆ ಅಕ್ಕೇರಿ ಸುರೇಶ್ ಶೆಟ್ಟಿ 100 ಮೀಟರ್‌ ಅನ್ನು 9.37 ಸೆಕೆಂಡ್, ಅಶ್ವತ್ಥಪುರ ಶ್ರೀನಿವಾಸ ಗೌಡ 9.44 ಸೆಕೆಂಡ್ ಹಾಗೂ ಇರ್ವತ್ತೂರು ಆನಂದ 9.57 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದರು. ವಿಶ್ವನಾಥ ಬೈಂದೂರು ಅವರು ಶನಿವಾರ ರಾತ್ರಿ ಸುರೇಶ್‌ ಶೆಟ್ಟಿ ದಾಖಲೆ ಮುರಿದರು.

ಐಕಳದಲ್ಲಿ ಶನಿವಾರ ವಿಶ್ವನಾಥ ಬೈಂದೂರು ಅವರು ಬೋಳದಗುತ್ತು ಸತೀಶ್ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ಓಡಿಸಿದ್ದರು. ಒಟ್ಟು ಕರೆ (ಕಂಬಳದ ಓಟದ ಟ್ರ್ಯಾಕ್‌) 125 ಮೀಟರ್‌ ಇದ್ದು, 11.44 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಕರೆಗೆ ಅಳವಡಿಸಿರುವ ಸೆನ್ಸಾರ್‌ ಮೂಲಕ ಸಮಯವನ್ನು ದಾಖಲಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.