ಬುಧವಾರ, ಏಪ್ರಿಲ್ 21, 2021
30 °C

ಹ್ಯಾಂಡ್‌ಬಾಲ್‌: ಕರ್ನಾಟಕ ತಂಡಕ್ಕೆ ರಜನಿ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರಪ್ರದೇಶದ ಬರೇಲಿಯಲ್ಲಿ ಮಾರ್ಚ್‌ 17ರಿಂದ ನಡೆಯುವ ರಾಷ್ಟ್ರೀಯ ಮಹಿಳಾ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ರಜನಿ.ಜೆ. ತಂಡದ ಸಾರಥ್ಯ ವಹಿಸಲಿದ್ದಾರೆ.

ತಂಡದ ಆಯ್ಕೆಯಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಟ್ರಯಲ್ಸ್ ನಡೆದಿದ್ದವು. ಇದೇ ವೇಳೆ 10 ದಿನಗಳ ತರಬೇತಿ ಶಿಬಿರವನ್ನೂ ಕರ್ನಾಟಕ ಹ್ಯಾಂಡ್‌ಬಾಲ್ ಸಂಸ್ಥೆಯು ಆಯೋಜಿಸಿತ್ತು.

ತಂಡ ಇಂತಿದೆ: ರಜನಿ ಜೆ. (ನಾಯಕಿ) ವಿಜಯಲಕ್ಷ್ಮೀ ಬಸನಗೌಡರ, ನಿವೇದಿತಾ ಸಾಹು, ಸ್ವಾತಿ ವೀಣಾ, ವೀಣಾ ಪಿ.ಎ, ಸುಹಾನ ಜಂಬಗಿ, ಸುಚಿತ್ರಾ ಎಸ್‌. ಮುದ್ದೆಮ್ಮನವರ, ಋತುಜಾ ಪಾಟೀಲ, ಸುಪ್ರಿನಾ ಎಸ್‌.ಪಿ, ಸಂಗೀತಾ ಟಿ, ಸುಷ್ಮಾ ಎಂ, ಶಿಲ್ಪಾ ಎಸ್‌.ಕೆ, ಮೇಘಾ ಚಮಕೇರಿ, ಸುಮಲತಾ ಆರ್‌.ಕೆ, ಸುಮಾ ಎಸ್‌. ಹಲ್ಲಳ್ಕರ್‌, ಚಂದ್ರಕಲಾ ಎಸ್‌.ಗುಂಡಪ‍್ಪಲವರ. ಮ್ಯಾನೇಜರ್‌: ಸುಹಾಸಿನಿ ಪಿ.ಎಸ್‌. ಕೋಚ್: ಕೆ.ರಾಘವೇಂದ್ರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.