ಖೇಲೊ ಇಂಡಿಯಾ ಯುವ ಕ್ರೀಡಾಕೂಟ: ಕರ್ನಾಟಕ ಈಜು ತಂಡ ರನ್ನರ್ಸ್‌ ಅಪ್‌

7
ದೆಹಲಿ, ಮಹಾರಾಷ್ಟ್ರ ತಂಡಗಳಿಗೆ ಚಾಂಪಿಯನ್‌ ಪಟ್ಟ

ಖೇಲೊ ಇಂಡಿಯಾ ಯುವ ಕ್ರೀಡಾಕೂಟ: ಕರ್ನಾಟಕ ಈಜು ತಂಡ ರನ್ನರ್ಸ್‌ ಅಪ್‌

Published:
Updated:
Prajavani

ಪುಣೆ: ಕರ್ನಾಟಕ ತಂಡವು ಮಂಗಳ ವಾರ ಮುಕ್ತಾಯಗೊಂಡ ಖೇಲೊ ಇಂಡಿಯಾ ಯುವ ಕ್ರೀಡಾಕೂಟದ 17 ಮತ್ತು 21 ವರ್ಷದೊಳಗಿನವರ ಈಜು ಸ್ಪರ್ಧೆಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆಯಿತು.

242 ಪಾಯಿಂಟ್ಸ್‌ ಗಳಿಸಿದ ದೆಹಲಿ ತಂಡವು ಚಾಂಪಿಯನ್‌ ಆಯಿತು. ಕರ್ನಾಟಕ ತಂಡವು 201 ಪಾಯಿಂಟ್ಸ್‌ ಗಳನ್ನು ಕಲೆಹಾಕಿತು. 145 ಪಾಯಿಂಟ್ಸ್‌ ಗಳಿಸಿದ ಮಹಾರಾಷ್ಟ್ರ ತಂಡವು ತೃತೀಯ ಸ್ಥಾನ ಗಳಿಸಿತು. 

21 ವರ್ಷದೊಳಗಿನವರ ವಿಭಾಗದಲ್ಲಿ ಮಹಾರಾಷ್ಟ್ರ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು, ಈ ತಂಡವು ಒಟ್ಟು 192 ಪಾಯಿಂಟ್ಸ್‌ಗಳನ್ನು ಗಳಿಸಿತು. 187 ಪಾಯಿಂಟ್ಸ್ ಗಳಿಸಿದ್ದ ಕರ್ನಾಟಕ ತಂಡವು ರನ್ನರ್‌ ಅಪ್‌ ಸ್ಥಾನ ಪಡೆಯಿತು. 

ಶ್ರೀಹರಿಗೆ ಎರಡು ಚಿನ್ನದ ಪದಕ: ಕರ್ನಾಟಕದ ಶ್ರೀಹರಿ ನಟರಾಜ್‌, 21 ವರ್ಷದೊಳಗಿನ ಬಾಲಕರ  50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ 26.16 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಹಾಗೆಯೇ 100 ಮೀ. ಫ್ರೀಸ್ಟೈಲ್‌ ವಿಭಾ ಗದಲ್ಲಿ 52.37 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಮೊದಲ ಸ್ಥಾನ ಗಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಫಲಿತಾಂಶಗಳು: ಬಾಲಕಿಯರು: 17 ವರ್ಷದೊಳಗಿನವರು: 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಸುವನಾ ಭಾಸ್ಕರ್‌ (ಕರ್ನಾಟಕ; ಕಾಲ: 31.27 ಸೆಕೆಂಡು)–1, ಪ್ರತ್ಯಾಸ ರಾಯ್‌ (ಒಡಿಶಾ)–2, ಆಲಿಯಾ ಸಿಂಗ್‌ (ಉತ್ತರ ಪ್ರದೇಶ)–3; 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಕರೀನಾ ಎಸ್‌. (ಮಹಾರಾಷ್ಟ್ರ; ಕಾಲ:2 ನಿಮಿಷ, 47.55 ಸೆಕೆಂಡು)–1, ಸಾನ್ವಿ ರಾವ್‌ (ಕರ್ನಾಟಕ)–2, ಎಸ್‌.ಆರ್‌.ರಚನಾ ರಾವ್‌ (ಕರ್ನಾಟಕ)–3; 1500 ಮೀಟರ್ಸ್‌ ಫ್ರೀಸ್ಟೈಲ್‌: ಪ್ರಾಚಿ ಟೋಕಾಸ್ (ದೆಹಲಿ; ಕಾಲ:18 ನಿಮಿಷ, 9.31 ಸೆಕೆಂಡು)–1, ಖುಷಿ ದಿನೇಶ್‌ (ಕರ್ನಾಟಕ)–2, ವಿ.ವರ್ಷಾ (ತಮಿಳುನಾಡು)–3; 21 ವರ್ಷದೊಳಗಿನವರು: 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಜ್ಯೋತಿ ಪಾಟೀಲ (ಮಹಾರಾಷ್ಟ್ರ; ಕಾಲ: 2 ನಿಮಿಷ, 43.54 ಸೆಕೆಂಡು)–1, ಕಲ್ಯಾಣಿ ಸಕ್ಸೇನಾ (ಗುಜರಾತ್‌)–2, ಹರ್ಷಿತಾ ಜಯರಾಂ (ಕರ್ನಾಟಕ)–3. 

ಬಾಲಕರು: 17 ವರ್ಷದೊಳಗಿ ನವರು: 100 ಮೀಟರ್ಸ್‌ ಫ್ರೀಸ್ಟೈಲ್‌: ವೀರ್‌ ಕಾಟ್ಕರ್‌ (ಹರಿಯಾಣ; ಕಾಲ: 53.54 ಸೆಕೆಂಡು)–1, ಸಿ.ಜೆ.ಸಂಜಯ್‌ (ಕರ್ನಾಟಕ)–2, ಜ್ಞಾನ್‌ ಸಂಧಾನ್‌ ಕಶ್ಯಪ್‌ (ದೆಹಲಿ)–3; 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಸ್ವದೇಶ್‌ ಮಂಡಲ್‌ (ದೆಹಲಿ; ಕಾಲ: 2 ನಿಮಿಷ, 26.91 ಸೆಕೆಂಡು)–1, ಶ್ರೀದೀಪ್‌ ಮಂಡಲ್‌ (ಪಶ್ಚಿಮ ಬಂಗಾಳ)–2, ಲಿತೇಶ್‌ ಜಿ ಗೌಡ (ಕರ್ನಾಟಕ)–3.

21 ವರ್ಷದೊಳಗಿನವರು: 50 ಮೀ. ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಹ್‌ (ಕರ್ನಾಟಕ; ಕಾಲ: 26.16 ಸೆಕೆಂಡು)–1, ಜೇವಿಯರ್‌ ಡಿಸೋಜಾ (ಗೋವಾ)–2, ವೇದಾಂತ್‌ ಸೇತ್‌ (ಹರಿಯಾಣ)–3; 100 ಮೀಟರ್ಸ್‌ ಫ್ರೀಸ್ಟೈಲ್‌: ಶ್ರೀಹರಿ ನಟರಾಜ್‌ (ಕರ್ನಾಟಕ; ಕಾಲ: 52.37 ಸೆಕೆಂಡು)–1, ಜೇವಿಯರ್ ಡಿಸೋಜಾ (ಗೋವಾ)–2, ಆ್ಯರನ್‌ ಫರ್ನಾಂಡೀಸ್‌ (ಮಹಾರಾಷ್ಟ್ರ)–3; 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಎಂ.ಲೋಹಿತ್‌ (ಆಂಧ್ರಪ್ರದೇಶ; ಕಾಲ:2 ನಿಮಿಷ, 22.20 ಸೆಕೆಂಡು)–1, ಧನುಷ್‌ ಸುರೇಶ್‌ (ತಮಿಳುನಾಡು)–2, ಎಸ್‌.ಪಿ.ಲಿಖಿತ್‌ (ಕರ್ನಾಟಕ)–3.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !