ಮಂಗಳವಾರ, ಮಾರ್ಚ್ 28, 2023
25 °C

ಮಧ್ಯಪ್ರದೇಶ: ಇಂದಿನಿಂದ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟ ಆರಂಭ

ಪಿಟಿಐ, ಎಫ್‌ಪಿ Updated:

ಅಕ್ಷರ ಗಾತ್ರ : | |

ಭೋಪಾಲ್: ಇಲ್ಲಿನ ತಾತ್ಯಾ ತೋಪೆ ನಗರ ಕ್ರೀಡಾಂಗಣದಲ್ಲಿ ಖೇಲೊ ಇಂಡಿಯಾ ಯೂತ್ ಗೇಮ್ಸ್ (ಕೆಐವೈಜಿ 2022) ಐದನೇ ಆವೃತ್ತಿಯನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ಸಂಜೆ ಉದ್ಘಾಟಿಸಲಿದ್ದಾರೆ.

ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರ ಉಪಸ್ಥಿತಿ ಇರಲಿದ್ದು, ರಾಜ್ಯದ ಎಂಟು ನಗರಗಳ 23 ಸ್ಥಳಗಳಲ್ಲಿ ನಡೆಯಲಿದೆ.  27 ವಿವಿಧ ಕ್ರೀಡೆಗಳ ಸುಮಾರು 6,000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ‘ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ  ಕಯಾಕಿಂಗ್, ಕ್ಯಾನೋಯಿಂಗ್, ಕ್ಯಾನೋ ಸ್ಲಾಲೋಮ್ ಮತ್ತು ಫೆನ್ಸಿಂಗ್‌ನಂತಹ ಕ್ರೀಡೆಗಳು ಇರಲಿವೆ. ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದಿನಿಂದ 13 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯು 'ಹಿಂದೂಸ್ತಾನ್ ಕಾ ದಿಲ್ ಧಡ್ಕಾ ದೋ' ಥೀಮ್‌ ಮೂಲಕ ಪ್ರಾರಂಭವಾಗಲಿವೆ’ ಎಂದು ಚೌಹಾಣ್ ಭಾನುವಾರ ಸುದ್ದಿಗಾರರಿಗೆ ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಕಲಾವಿದರಾದ ಶಾನ್, ನೀತಿ ಮೋಹನ್, ಶಿವಮಣಿ ಮತ್ತು ಅಭಿಲಿಪ್ಸಾ ಪಾಂಡಾ ಅವರು ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಭೋಪಾಲ್, ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಜಬಲ್‌ಪುರ್ ಮಂಡ್ಲಾ, ಬಾಲಾಘಾಟ್ ಮತ್ತು ಖಾರ್ಗೋನ್ ಸೇರಿ ಎಂಟು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ದೆಹಲಿಯಲ್ಲಿ ಒಂದು ಸೈಕ್ಲಿಂಗ್ ಕಾರ್ಯಕ್ರಮ ಸಹ ನಡೆಯಲಿದೆ ಎಂದಿದ್ದಾರೆ.

ಒಟ್ಟು 303 ಅಂತರರಾಷ್ಟ್ರೀಯ ಮತ್ತು 1,089 ರಾಷ್ಟ್ರೀಯ ಅಧಿಕಾರಿಗಳು ಕ್ರೀಡಾಕೂಟದ ಭಾಗವಾಗಲಿದ್ದಾರೆ. ಸುಮಾರು 2,000 ಸ್ವಯಂಸೇವಕರನ್ನು ವಿವಿಧ ಕ್ರೀಡಾ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು