ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾನುವಾರ ಭಾರತಕ್ಕೆ ಚಿನ್ನದ ಸಂಭ್ರಮ ಮೂಡಿದೆ. ಸಿಎಚ್–6 ವರ್ಗದ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಕೃಷ್ಣಾ ನಾಗರ್ 'ಚಿನ್ನದ' ಗೆಲುವು ಸಾಧಿಸಿದ್ದಾರೆ.
ಹಾಂಕಾಂಗ್‌ನ ಚು ಮನ್ ಕಾಯ್ ಅವರ ಎದುರು ಜೈಪುರದ 22 ವರ್ಷ ವಯೋಮಾನದ ಕೃಷ್ಣಾ, 21-17, 16-21, 21-17 ಅಂತರದಲ್ಲಿ ಗೆಲುವು ಪಡೆದರು. ಶನಿವಾರ ಭಾರತದ ಪ್ರಮೋದ್ ಭಗತ್ ಬ್ಯಾಡ್ಮಿಂಟನ್‌ನಲ್ಲಿ (ಎಸ್‌ಎಲ್–3) ಮೊದಲ ಚಿನ್ನದ ಗೆಲುವು ತಂದಿದ್ದರು. ಈಗ ಕೃಷ್ಣಾ ಸಹ ಅವರ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಐದನೇ ಚಿನ್ನದ ಪದಕ ಲಭಿಸಿದೆ.
ಇದಕ್ಕೂ ಮುನ್ನ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ಕನ್ನಡಿಗ ಸುಹಾಸ್ ಯತಿರಾಜ್, ಪುರುಷರ ಬ್ಯಾಡ್ಮಿಂಟನ್ (ಎಸ್‌ಎಲ್–4) ಫೈನಲ್‌ನಲ್ಲಿ ಫ್ರಾನ್ಸ್‌ನ ಲೂಕಾಸ್ ಮಜೂರ್ ಎದುರು ಸೋಲು ಕಂಡರು. 38 ವರ್ಷ ವಯೋಮಾನದ ಸುಹಾಸ್ ಅವರು ಮಜೂರ್ ಎದುರು 62 ನಿಮಿಷಗಳ ಹೋರಾಟದಲ್ಲಿ 21-15, 17-21, 15-21 ಅಂತರದಲ್ಲಿ ಸೋತು, ಬೆಳ್ಳಿ ಪದಕ ಜಯಿಸಿದರು.
ಇನ್ನಷ್ಟು ಓದು...
ಕೃಷ್ಣಾ ನಾಗರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದನೆ ಸಲ್ಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.