ಶನಿವಾರ, ಏಪ್ರಿಲ್ 17, 2021
30 °C

ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ 23ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸುವ ಪ್ರೊ.ಎನ್‌.ಸಿ.ಪರಪ್ಪ ಸ್ಮಾರಕ ‘ಎ’ ಡಿವಿಷನ್ ಲೀಗ್  ಚಾಂಪಿಯನ್‌ಷಿಪ್‌ ಇದೇ 23ರಿಂದ ಮೇ ಎರಡರ ವರೆಗೆ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ 13 ತಂಡಗಳು ಪಾಲ್ಗೊಳ್ಳಲಿವೆ. 23ರಂದು ಸಂಜೆ ನಾಲ್ಕು ಗಂಟೆಗೆ ಮೊದಲ ಪಂದ್ಯ ನಡೆಯಲಿದ್ದು ಎಎಸ್‌ಸಿ ಮತ್ತು ಜೆಎಸ್‌ಸಿ ತಂಡಗಳು ಸೆಣಸಲಿವೆ. ಐದು ಗಂಟೆಗೆ ಬಿಒಬಿ ಮತ್ತು ಬೀಗಲ್ಸ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌, ಆರು ಗಂಟೆಗೆ ಮಂಗಳೂರು ಬಿ.ಸಿ ಮತ್ತು ಸದರ್ನ್‌ ಬ್ಲೂಸ್‌ ತಂಡಗಳು ಸೆಣಸಲಿವೆ.

ಮತ್ತೊಂದು ಅಂಗಣದಲ್ಲಿ ಸಂಜೆ 4 ಗಂಟೆಗೆ ಎಸ್‌.ಪಿ.ಹಾಸ್ಟೆಲ್ ಮತ್ತು ಯಂಗ್ ಒರಾಯನ್ಸ್‌, ಐದು ಗಂಟೆಗೆ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮತ್ತು ಕಸ್ಟಮ್ಸ್‌, ಆರು ಗಂಟೆಗೆ ಕೋರ್‌ ಆಫ್ ಮಿಲಿಟರಿ ಪೊಲೀಸ್ ಮತ್ತು ರಾಜ್‌ಮಹಲ್ ತಂಡಗಳು ಪೈಪೋಟಿ ನಡೆಸಲಿವೆ.

ಬ್ಯಾಂಕ್ ಆಫ್ ಬರೋಡ, ಜಯನಗರ ಸ್ಪೋರ್ಟ್ಸ್ ಕ್ಲಬ್‌, ಜಿಎಸ್‌ಟಿ ಆ್ಯಂಡ್ ಕಸ್ಟಮ್ಸ್ ಸ್ಪೋರ್ಟ್ಸ್‌ ಬೋರ್ಡ್‌, ರೈಸಿಂಗ್ ಸ್ಟಾರ್ಸ್‌ ಮೈಸೂರು ಹಾಗೂ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು, ಲೀಗ್‌ನಲ್ಲಿ ಪಾಲ್ಗೊಳ್ಳುವ ಇತರ ತಂಡಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು