ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯನ್ ಅಥ್ಲೀಟ್ ಅಂಜು ಬಾಬಿ ಜಾರ್ಜ್‌ಗೆ ವರ್ಷದ ಮಹಿಳೆ ಪ್ರಶಸ್ತಿ

Last Updated 2 ಡಿಸೆಂಬರ್ 2021, 5:05 IST
ಅಕ್ಷರ ಗಾತ್ರ

ಮೊನಾಕೊ: ದೇಶದ ಪ್ರತಿಭಾನ್ವೇಷಣೆ ಮತ್ತು ಲಿಂಗ ಸಮಾನತೆಯ ಪ್ರತಿಪಾದನೆಗಾಗಿ ಭಾರತದ ಒಲಿಂಪಿಯನ್ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರಿಗೆ ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿಯ ಗೌರವ ಸಿಕ್ಕಿದೆ.

2003ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್ ಜಂಪ್ ಕಂಚಿನೊಂದಿಗೆ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾ ಪಟು ಎಂಬ ಖ್ಯಾತಿ ಹೊಮದಿರುವ ಅಂಜು ಅವರಿಗೆ ಬುಧವಾರ ಪ್ರಶಸ್ತಿ ಘೋಷಿಸಲಾಗಿದೆ.

'ಅಂಜು ಬಾಬಿ ಜಾರ್ಜ್ ಅವರು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016ರಲ್ಲಿ ಅವರು ಯುವತಿಯರಿಗಾಗಿ ತರಬೇತಿ ಅಕಾಡೆಮಿಯನ್ನು ತೆರೆದಿದ್ದು, ಅಲ್ಲಿ ತರಬೇತಿ ಪಡೆದವರು ಈಗಾಗಲೇ ವಿಶ್ವ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದಾರೆ’ ಎಂದು ವರ್ಲ್ಡ್ ಅಥ್ಲೆಟಿಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

‘ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಹಿರಿಯ ಉಪಾಧ್ಯಕ್ಷರಾಗಿ ಲಿಂಗ ಸಮಾನತೆಗಾಗಿ ನಿರಂತರ ಧ್ವನಿ ಎತ್ತಿದ್ದು ಮತ್ತು ಕ್ರೀಡೆಯಲ್ಲಿ ಭವಿಷ್ಯದ ಸಾಧನೆಗಾಗಿ ಶಾಲಾ ಮಕ್ಕಳಿಗೆ ಮಾರ್ಗದರ್ಶನ ನೀಡುವ ಮೂಲಕ ಕ್ರೀಡಾ ಅಭಿವೃದ್ಧಿಗೆ ನೆರವಾಗಿದ್ದಾರೆ’ ಎಂದು ಅದು ಹೇಳಿದೆ.

‘ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆದಿರುವುದು ನಿಜವಾಗಿಯೂ ಸಂತಸವಾಗಿದ್ದು, ಅತ್ಯಂತ ಗೌರವದ ವಿಚಾರವಾಗಿದೆ’ ಎಂದು ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.

‘ಪ್ರತಿದಿನ ಎದ್ದು ಕ್ರೀಡೆಗಾಗಿ ದುಡಿಯುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ, ಇದು ಯುವತಿಯರನ್ನು ಕ್ರೀಡೆಯಲ್ಲಿ ಸಕ್ರಿಯ ಮತ್ತು ಸಬಲೀಕರಣಗೊಳಿಸಲು ಅನುವು ಮಾಡಿಕೊಡುತ್ತದೆ! ನನ್ನ ಪ್ರಯತ್ನಗಳನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT