ಶನಿವಾರ, ಮೇ 15, 2021
26 °C
ನೇಪಾಳದಲ್ಲಿರುವ ವಿಶ್ವದ 10ನೇ ಅತಿ ಎತ್ತರದ ಪರ್ವತ

‘ಅನ್ನಪೂರ್ಣ’ ಪರ್ವತ ಆರೋಹಣ ಮಾಡಿದ ಪ್ರಿಯಾಂಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸತಾರಾದ ಪ್ರಿಯಾಂಕಾ ಮೋಹಿತೆ ಅವರು ವಿಶ್ವದ 10ನೇ ಅತಿ ಎತ್ತರದ ಪರ್ವತ ‘ಮೌಂಟ್‌ ಅನ್ನಪೂರ್ಣ‘ವನ್ನು ಆರೋಹಣ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ, 28 ವರ್ಷದ ಪ್ರಿಯಾಂಕಾ ಅವರ ಸಾಧನೆಯನ್ನು ಬಯೋಕಾನ್ ಲಿಮಿಟೆಡ್‌ನ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರು ಬಯೋಕಾನ್‌ನ ಉದ್ಯೋಗಿಯಾಗಿದ್ದಾರೆ.

‘ನಮ್ಮ ಸಹೋದ್ಯೋಗಿ ಪ್ರಿಯಾಂಕಾ ಮೋಹಿತೆ ಅವರು ಅನ್ನಪೂರ್ಣ ಪರ್ವತವನ್ನು (8091 ಮೀಟರ್‌ಗಳು) ಏಪ್ರಿಲ್ 16ರಂದು ಆರೋಹಣ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಅವರು. ಈ ಕುರಿತು ನಮಗೆ ಹೆಮ್ಮೆಯಿದೆ‘ ಎಂದು ಕಿರಣ್ ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾ ಅವರು ಶಿಖರದ ಮೇಲೆ ರಾಷ್ಟ್ರಧ್ವಜ ಹಿಡಿದು ನಿಂತಿರುವ ಚಿತ್ರವನ್ನೂ ಕಿರಣ್ ಹಂಚಿಕೊಂಡಿದ್ದಾರೆ.

ನೇಪಾಳದಲ್ಲಿರುವ ‘ಅನ್ನಪೂರ್ಣ‘ವು ಆರೋಹಣಕ್ಕೆ ಕಷ್ಟಕರವಾದ ಪರ್ವತಗಳಲ್ಲಿ ಒಂದಾಗಿದೆ.

ಪ್ರಿಯಾಂಕಾ, 2013ರಲ್ಲಿ ವಿಶ್ವದ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ (8,849 ಮೀ.), 2018ರಲ್ಲಿ ಲೋಟ್ಸೆ (8,516 ಮೀ.), ಮಕಾಲು (8,485 ಮೀ.) ಹಾಗೂ 2016ರಲ್ಲಿ ಕಿಲಿಮಂಜಾರೊ (5,895 ಮೀ.) ಪರ್ವತಗಳನ್ನೂ ಏರಿದ ಸಾಧನೆ ಮಾಡಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಪ್ರಿಯಾಂಕಾ ಅವರ ಸಾಧನೆಗೆ 2017–18ರ ಸಾಲಿನ ಶಿವ ಛತ್ರಪತಿ ರಾಜ್ಯ ಪ್ರಶಸ್ತಿಯನ್ನು ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು