ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುನಾಥೇಶ್ವರ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಕ.ವಿ.ವಿ. ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌: ಮೂರು ದಿನದಲ್ಲಿ ಏಳು ದಾಖಲೆ ನಿರ್ಮಾಣ
Last Updated 12 ಡಿಸೆಂಬರ್ 2019, 9:59 IST
ಅಕ್ಷರ ಗಾತ್ರ

ಧಾರವಾಡ:‌ ಮೂರೂ ದಿನ ಪದಕಗಳನ್ನು ಬೇಟೆಯಾಡಿದ ಜೆಎಸ್ಎಸ್ ಮಂಜುನಾಥೇಶ್ವರ ಕಾಲೇಜು ತಂಡದವರು, ಜೆಎಸ್‌ಎಸ್‌ ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್‌.ಕೆ.ಗುಬ್ಬಿ ವಿಜ್ಞಾನ ಕಾಲೇಜು ಆತಿಥ್ಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.

ಆರ್‌.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯವಾದ ಕ್ರೀಡಾಕೂಟದಲ್ಲಿ ಮಂಜುನಾಥೇಶ್ವರ ಕಾಲೇಜು 13 ಚಿನ್ನ, 11 ಬೆಳ್ಳಿ ಹಾಗೂ 8 ಕಂಚಿನ ಪದಕದೊಂದಿಗೆ ಒಟ್ಟು 32 ಪದಕಗಳನ್ನು ಜಯಿಸಿತು. ಈ ತಂಡ 63 ಅಂಕ ಪಡೆದು ₹25 ಸಾವಿರ ಬಹುಮಾನ ಪಡೆಯಿತು.

ಹೊನ್ನಾವರದ ಎಂಪಿಇ ಎಸ್‌ಡಿಎಂ ಕಾಲೇಜಿನ ಕ್ರೀಡಾಪಟುಗಳು ಒಟ್ಟು 16 ಪದಕಗಳನ್ನು ಪಡೆದು ರನ್ನರ್ಸ್‌ ಅಪ್‌ ಗೌರವ ಪಡೆದರೆ, ಜೆಎಸ್‌ಎಸ್‌ ಬನಶಂಕರಿ ಕಾಲೇಜು 15 ಪದಕಗಳೊಂದಿಗೆ ಮೂರನೇ ಸ್ಥಾನ ಸಂಪಾದಿಸಿತು.

ಮಂಜುನಾಥೇಶ್ವರ ಕಾಲೇಜು ಪುರುಷರ ವಿಭಾಗದ ಚಾಂಪಿಯನ್‌ಷಿಪ್‌ ಪಡೆಯಿತು. ಹೊನ್ನಾವರದ ಎಂಪಿಇ ಎಸ್‌ಡಿಎಂ ಪದವಿ ಕಾಲೇಜು ರನ್ನರ್ಸ್‌ ಅಪ್ ಆಯಿತು. ಮಹಿಳಾ ವಿಭಾಗದಲ್ಲಿ ಮಂಜುನಾಥೇಶ್ವರ ಕಾಲೇಜು ಚಾಂಪಿಯನ್ ಆದರೆ, ಧಾರವಾಡದ ಎಂವಿಎಎಸ್ ಕೆ.ಜಿ.ನಾಡಿಗೇರ ಕಾಲೇಜು ರನ್ನರ್ಸ್ ಅಪ್‌ ಆಯಿತು.

ಹುಬ್ಬಳ್ಳಿಯ ಕೆಎಲ್‌ಇ ಎಸ್‌ಕೆ ಕಾಲೇಜಿನ ವಿನಾಯಕ ಸೊಟ್ಟಣ್ಣವರ ಪುರುಷರ ವಿಭಾಗದ ‘ಅತ್ಯುತ್ತಮ ಅಥ್ಲೀಟ್‌’ ಮತ್ತು ಮಹಿಳಾ ವಿಭಾಗದಲ್ಲಿ ಮಂಜುನಾಥೇಶ್ವರ ಕಾಲೇಜಿನ ಮೇಘಾ ಮುನವಳ್ಳಿಮಠ ‘ಅತ್ಯುತ್ತಮ ಅಥ್ಲೀಟ್‌’ ಗೌರವ ಪಡೆದರು.

ಅಂತರರಾಷ್ಟ್ರೀಯ ಕುಸ್ತಿ ಪಟು ರತನ್ ಕುಮಾರ್ ಮಠಪತಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಐರನ್‌ಮ್ಯಾನ್‌ ಸ್ಪರ್ಧೆಯಲ್ಲಿ ವಿಜೇತರಾದ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಮುರುಗೇಶ ಚನ್ನಣ್ಣವರ, ಸ್ಕೇಟಿಂಗ್‌ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಹುಬ್ಬಳ್ಳಿಯ ಓಜಲ್‌ ನಲವಡೆ ಅವರನ್ನು ಸನ್ಮಾನಿಸಲಾಯಿತು.

ಮೂರನೇ ದಿನದ ಫಲಿತಾಂಶ: ಪುರುಷರ ವಿಭಾಗ: 100 ಮೀ. ಓಟ: ಕೌಶಿಕ್ (ಮಂಜುನಾಥೇಶ್ವರ ಕಾಲೇಜು; 10.96ಸೆ.)–1, ರವಿಕಿರಣ (ಬಲಶಂಕರಿ ಕಾಲೇಜು)–2, ಕಾರ್ತಿಕ್ ಪಿ ಹೊಸಮನಿ (ಹುಬ್ಬಳ್ಳಿಯ ಕೆಎಸ್‌ಎಸ್ ಕಾಲೇಜು)–3.

1500ಮೀ. ಓಟ: ಪ್ರಕಾಶ ಹಾವೇರಿ (ಮಂಜುನಾಥೇಶ್ವರ ಕಾಲೇಜು; 4:16.12ಸೆ.)–1, ಸಮೃದ್ಧ ಎಸ್.ನಾಯಕ್ (ಕಾರವಾರದ ಸರ್ಕಾರಿ ಕಾಲೇಜು)–2, ಬಸವರಾಜ ಸುಣಗಾರ (ಹುಬ್ಬಳ್ಳಿಯ ಸರ್ಕಾರಿ ಕಾಲೇಜು)–3.

20 ಕಿ.ಮೀ. ನಡಿಗೆ: ಸುಬ್ರಹ್ಮಣ್ಯ ಗೌಡ (ಹೊನ್ನಾವರದ ಸರ್ಕಾರಿ ಕಾಲೇಜು; 2:27:15.44ಸೆ.)–1, ಸಂತೋಷ ಎಸ್.ಲಂಬೋರೆ (ಕಾರವಾರದ ಸರ್ಕಾರಿ ಕಾಲೇಜು)–2, ತಿಪ್ಪಣ್ಣ ಎಚ್.ಹಿಪ್ಪಿಯವರ (ಹಾನಗಲ್‌ ಕುಮಾರೇಶ್ವರ ಕಾಲೇಜು)–3.

ಹಾಫ್‌ ಮ್ಯಾರಥಾನ್: ನವೀನ್ ಪಾಟೀಲ (ಬನಶಂಕರಿ ಕಾಲೇಜು; 1:07:55.51ಸೆ.)–1, ರಾಜು ಪೆರಗಣ್ಣವರ (ಮಂಜುನಾಥೇಶ್ವರ ಕಾಲೇಜು)–2, ವರುಣ ಅಪ್ಪಾರ (ಬನಶಂಕರಿ ಕಾಲೇಜು)–3.

400ಮೀ. ಹರ್ಡಲ್ಸ್‌: ಪ್ರಣಮ್‌ ಶೆಟ್ಟಿ (ಬನಶಂಕರಿ ಕಾಲೇಜು; 56.48ಸೆ.)–1, ಲತೇಶ್ ನಾಯ್ಕ್ (ಹೊನ್ನಾವರದ ಎಸ್‌ಡಿಎಂ ಕಾಲೇಜು)–2, ಗಿರೀಶ ಹೂಲಿ (ಹುಬ್ಬಳ್ಳಿಯ ಆಕ್ಸಫರ್ಡ್ ಕಾಲೇಜು)–3.

ಪೋಲ್‌ ವಾಲ್ಟ್: ಸಂದೇಶ ಮುಕ್ರಿ (ಹೊನ್ನಾವರದ ಸರ್ಕಾರಿ ಕಾಲೇಜು; 2.60ಮೀ)–1, ವಿನಾಯಕ ಬೊಮ್ಮಗೌಡ (ಹೊನ್ನಾವರದ ಸರ್ಕಾರಿ ಕಾಲೇಜು)–2, ಅನಿಲ ಭಜಂತ್ರಿ (ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಕಾಲೇಜು)–3.

ಮಹಿಳೆಯರ ವಿಭಾಗ: 100ಮೀ ಓಟ: ಜೋಶ್ನಾ (ಮಂಜುನಾಥೇಶ್ವರ ಕಾಲೇಜು; 12.38ಸೆ.)–1, ಐಶ್ವರ್ಯ ಸಿಡಗನಾಳ (ಮಂಜುನಾಥೇಶ್ವರ ಕಾಲೇಜು)–2, ಗೌಡರ ದೀಪಾ (ಕಲಘಟಗಿಯ ಜಿಎನ್‌ಡಬ್ಲ್ಯು ಕಾಲೇಜು)–3.

400ಮೀ. ಹರ್ಡಲ್ಸ್‌: ಮೇಘಾ ಮುನವಲ್ಲಿಮಠ (ಮಂಜುನಾಥೇಶ್ವರ ಕಾಲೇಜು; 1:09.18ಸೆ.)–1, ಕಮಲಾ ಮೂಗನೂರ (ಮಂಜುನಾಥೇಶ್ವರ ಕಾಲೇಜು)–2, ಎಚ್.ಜಿ.ಗಂಗಮ್ಮ (ಹುಬ್ಬಳ್ಳಿಯ ಎಸ್‌ಎಸ್‌ಕೆ ಕಾಲೇಜು)–3.

ಹ್ಯಾಮರ್ ಥ್ರೋ: ರಾಹತ್ ಎನ್.ಸೈಯದ್ (ಕಾರವಾರದ ಸರ್ಕಾರಿ ಕಾಲೇಜು; 27.94 ಮೀ.)–1, ತಝೀನ್ ಸೌದಾಗರ್ (ಮಂಜುನಾಥೇಶ್ವರ ಕಾಲೇಜು)–2, ಚಂದನಾ ಎಚ್.ನಾಯ್ಕ್ (ಶಿರಸಿಯ ಎಂಇಎಸ್ ಕಾಲೇಜು)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT