ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ | ಆನ್‌ಲೈನ್‌ ಪಾಠ ಮಾಡಿದ ಮೇರಿ

Last Updated 28 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ. ಮೇರಿ ಕೋಮ್‌ ಅವರು ‘ಇಂಜುರಿ ಮ್ಯಾನೇಜ್‌ಮೆಂಟ್‌’ ವಿಷಯದ ಕುರಿತು ಸುಮಾರು 300 ಬಾಕ್ಸರ್‌ಗಳಿಗೆ ಆನ್‌ಲೈನ್‌ ಪಾಠ ಮಾಡಿದ್ದಾರೆ.

ಲಾಕ್‌ಡೌನ್‌ನ ಕಾರಣ ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಆನ್‌ಲೈನ್‌ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದರ ಅಂಗವಾಗಿ ಮಂಗಳವಾರ ನಡೆದ ಸೆಷನ್‌ನಲ್ಲಿ ಭಾರತ ಬಾಕ್ಸಿಂಗ್‌ ತಂಡದ ವೈದ್ಯರು ಹಾಗೂ ಫಿಸಿಯೊಗಳ ಜೊತೆ ಮೇರಿ ಕೋಮ್‌ ಸಂವಾದ ನಡೆಸಿದರು. ಜೊತೆಗೆ ಯುವ ಬಾಕ್ಸರ್‌ಗಳಿಗೆ ಹಲವು ಸಲಹೆಗಳನ್ನೂ ನೀಡಿದರು.

‘ವೈದ್ಯರು ಹಾಗೂ ಫಿಸಿಯೊಗಳ ಜೊತೆ ನಡೆಸಿದ ಸಂವಾದದಿಂದಾಗಿ ಹಲವು ಮಹತ್ವದ ವಿಷಯಗಳು ಅರಿವಿಗೆ ಬಂದವು. ಎಲ್ಲಾ ಬಗೆಯ ಗಾಯಗಳಿಗೂ ಶಸ್ತ್ರಚಿಕಿತ್ಸೆಯೇ ಮದ್ದಲ್ಲ ಎಂಬುದೂ ತಿಳಿಯಿತು’ ಎಂದು ಮೇರಿ ತಿಳಿಸಿದ್ದಾರೆ.

‘ಗಾಯದಿಂದ ಪಾರಾಗಬೇಕಾದರೆ ನಿತ್ಯವೂ ಒಂದಷ್ಟು ಹೊತ್ತು ಸರಳ ವ್ಯಾಯಾಮಗಳನ್ನು ಮಾಡಬೇಕು. ನನಗೆ ತುಂಬಾ ದಿನಗಳಿಂದ ಬೆನ್ನು ನೋವು ಕಾಡುತ್ತಿತ್ತು. ಫಿಸಿಯೊಗಳು ನೀಡಿದ ಸಲಹೆಯನ್ನು ಪಾಲಿಸಿದ ಬಳಿಕ ನೋವೆಲ್ಲಾ ಮಾಯವಾಯಿತು. ಹೀಗಾಗಿ ಎಲ್ಲರೂ ಫಿಸಿಯೊಗಳ ಸಲಹೆಯನ್ನು ಚಾಚೂ ತ‍ಪ್ಪದೆ ಪಾಲಿಸಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT