ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ದಾಖಲೆ ಸರಿಗಟ್ಟಿದ ಮ್ಯಾಟ್‌ ವಿಲ್ಸನ್‌

ವಿಶ್ವ ಈಜು ಚಾಂಪಿಯನ್‌ಷಿಪ್‌ನ 200 ಮೀ. ಬ್ರೆಸ್ಟ್‌ಸ್ಟ್ರೋಕ್‌
Last Updated 25 ಜುಲೈ 2019, 19:49 IST
ಅಕ್ಷರ ಗಾತ್ರ

ಗುವಾಂಗ್ಜು, ದಕ್ಷಿಣ ಕೊರಿಯಾ: ಈಜುಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಆಸ್ಟ್ರೇಲಿಯಾದ ಮ್ಯಾಟ್‌ ವಿಲ್ಸನ್‌, ಗುರುವಾರ ನಡೆದ ವಿಶ್ವ ಈಜು ಚಾಂಪಿಯನ್‌ಷಿಪ್‌ನ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

ಕಾಮನ್‌ವೆಲ್ತ್‌ ಕೂಟದಲ್ಲಿ ಕಂಚಿನ ಪದಕ ಪಡೆದಿದ್ದ ವಿಲ್ಸನ್‌, ತಮ್ಮ ಸೆಮಿಫೈನಲ್‌ ಸ್ಪರ್ಧೆಯನ್ನು 2ನಿ.6.67 ಸೆ.ಗಳಲ್ಲಿ ಪೂರೈಸಿ ನಿರಾಯಾಸವಾಗಿ ಮೊದಲಿಗರಾದರು. ಆ ಮೂಲಕ ಇಷ್ಟೇ ಅವಧಿಯಲ್ಲಿ ಗುರಿಮುಟ್ಟಿದ್ದ ಜಪಾನ್‌ನ ಇಪ್ಪೈ ವತಾನಬೆ ಅವರ ದಾಖಲೆ ಸರಿಗಟ್ಟಿದರು. ಶುಕ್ರವಾರ ನಡೆಯುವ ಫೈನಲ್‌ಗೆಜಪಾನ್‌ನ ಸ್ಪರ್ಧಿಯೂ ಅರ್ಹತೆ ಪಡೆದಿದ್ದಾರೆ.‌

100 ಮೀ. ಫ್ರೀಸ್ಟೈಲ್‌ ಗೆದ್ದ ಡ್ರೆಸೆಲ್‌: ಅಮೆರಿಕದ ಕೆಲೆಬ್‌ ಡ್ರೆಸೆಲ್‌, ಕೂಟದ ಆಕರ್ಷಣೆ ಎನಿಸಿದ 100 ಮೀಟರ್‌ ಫ್ರೀಸ್ಟೈಲ್‌ ಸ್ಪರ್ಧೆಯ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಂಡರು. ಆ ಮೂಲಕ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಚಿನ್ನ ಗೆದ್ದುಕೊಂಡರು.

ಎರಡು ವರ್ಷ ಹಿಂದೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಏಳು ಚಿನ್ನ ಗೆದ್ದುಕೊಂಡಿದ್ದ22ರ ಹರೆಯದ ಡ್ರೆಸೆಲ್‌, ಈ ಸ್ಪರ್ಧೆಯನ್ನು 46.96 ಸೆಕೆಂಡುಗಳಲ್ಲಿ ಕ್ರಮಿಸಿದರು. ಅವರಿಗೆ ನಿರೀಕ್ಷಿತ ಪ್ರತಿಸ್ಪರ್ಧಿ, ಒಲಿಂಪಿಕ್‌ ಚಾಂಪಿಯನ್‌ ಕೈಲ್‌ ಚಾಮರ್ಸ್‌ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು. ಚಾಮರ್ಸ್‌ 47.08 ಸೆಕೆಂಡುಗಳನ್ನು ತೆಗೆದುಕೊಂಡರೆ, ರಷ್ಯಾದ ವ್ಲಾದಿಸ್ಲಾವ್‌ ಗ್ರಿನೆವ್‌ 47.82 ಮೂರನೇ ಸ್ಥಾನ ಪಡೆದರು.

ರಿಯೊ ಒಲಿಂಪಿಕ್ಸ್‌ ವಿಜೇತ ಚಾಮರ್ಸ್‌ ಇಲ್ಲಿ ಗೆಲ್ಲಬಹುದೆಂಬ ನಿರೀಕ್ಷೆಯೂ ಇತ್ತು. ಆದರೆ ಡ್ರೆಸೆಲ್‌ ಆರಂಭದಿಂದಲೇ ಮುನ್ನುಗ್ಗಿ ಆರ್ಧ ಸ್ಪರ್ಧೆ ಮುಗಿಯುಷ್ಟರಲ್ಲಿ ಅಂತರ ಇನ್ನಷ್ಟು ಹೆಚ್ಚಿಸಿ ಗೆಲುವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರು. ಚಾಮರ್ಸ್‌ ಕೊನೆಯವರೆಗೂ ಬೆನ್ನಟ್ಟಿದರೂ ಡ್ರೆಸಲ್‌ ಅವರನ್ನು ಹಿಂದಿಕ್ಕಲು ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT