ಟೋಕಿಯೊ ಪ್ಯಾರಾಲಿಂಪಿಕ್ಸ್ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿರುವ ಭಾರತದ ಸುಮಿತ್ ಅಂತಿಲ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಮ್ಮ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ನಲ್ಲಿ ಮಿಂಚುತ್ತಲೇ ಇದ್ದಾರೆ. ಪ್ಯಾರಾಲಿಂಪಿಕ್ಸ್ನಲ್ಲಿ ಸುಮಿತ್ ಅಂತಿಲ್ ಅವರು ನಿರ್ಮಿಸಿದ ದಾಖಲೆಗೆ ರಾಷ್ಟ್ರವೇ ಹೆಮ್ಮೆಪಡುತ್ತಿದೆ' ಎಂದು ತಿಳಿಸಿದ್ದಾರೆ.

'ಪ್ರತಿಷ್ಠಿತ ಚಿನ್ನದ ಪದಕ ಗೆದ್ದ ಸುಮಿತ್ ಅವರಿಗೆ ಅಭಿನಂದನೆಗಳು' ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಜಪಾನ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಸುಮಿತ್ ಅಂತಿಲ್ ಅವರು ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದ್ದಾರೆ.

23 ವರ್ಷದ ಸುಮಿತ್ ಹರಿಯಾಣದ ಸೋನಿಪತ್ನವರು. 2015ರಲ್ಲಿ ಸಂಭವಿಸಿದ ಮೋಟರ್ಬೈಕ್ ಅಪಘಾತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಅವರು ತಮ್ಮ ಐದನೇ ಪ್ರಯತ್ನದಲ್ಲಿ ಬರೋಬ್ಬರಿ 68.55 ಮೀಟರ್ ದೂರ ಜಾವೆಲಿನ್ ಎಸೆದು ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಅವರು 62.88 ಮೀಟರ್ ದೂರ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದ್ದರು.

ಇವನ್ನೂ ಓದಿ...

*PV Web Exclusive: ಕೈಹಿಡಿದ ತಾಯಿಯ ದಿಟ್ಟತನ; ತರಬೇತಿಯ ‘ಶೈಲಿ’
*Paralympics: ಭಾರತಕ್ಕಿಂದು 4 ಪದಕ, ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ
*Paralympics: ದೇವೇಂದ್ರ ಝಝಾರಿಯಾ, ಯೋಗೇಶ್ಗೆ ಬೆಳ್ಳಿ, ಸುಂದರ್ ಸಿಂಗ್ಗೆ ಕಂಚು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.