ಬೆಂಗಳೂರು: ಗುಜರಾತ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳನ್ನು ಬುಧವಾರ ಪ್ರಕಟಿಸಲಾಗಿದೆ.

ಪುರುಷರ ತಂಡವನ್ನು ಎಸ್.ವಿ. ಸುನಿಲ್ ಮತ್ತು ಮಹಿಳಾ ತಂಡವನ್ನು ಕೃತಿಕಾ ಎಸ್.ಪಿ. ಮುನ್ನಡೆಸಲಿದ್ದಾರೆ. ಅಕ್ಟೋಬರ್ 2ರಿಂದ ಪಂದ್ಯಗಳು ನಡೆಯಲಿದ್ದು, ಮಹಿಳಾ ತಂಡವು ಜಾರ್ಕಂಡ್, ಪಂಜಾಬ್ ಮತ್ತು ಮಧ್ಯಪ್ರದೇಶ ತಂಡಗಳಿರುವ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮೊದಲ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಪಂಜಾಬ್ ಸವಾಲು ಎದುರಾಗಿದೆ.

ತಮಿಳುನಾಡು, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ತಂಡಗಳಿರುವ ಬಿ ಗುಂಪಿನಲ್ಲಿ ರಾಜ್ಯದ ಪುರುಷರ ತಂಡವಿದೆ. ಮೊದಲ ಹಣಾಹಣಿಯಲ್ಲಿ ಕರ್ನಾಟಕವು ಉತ್ತರಪ್ರದೇಶ ಎದುರು ಆಡಲಿದೆ.

ಎಡ್ವಿನ್‌ಗೆ ನಾಯಕತ್ವ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಫುಟ್‌ಬಾಲ್ ತಂಡವನ್ನು ಎಡ್ವಿನ್ ರೊಸಾರಿಯೊ ಮುನ್ನಡೆಸಲಿದ್ದಾರೆ. ದೀಪಕ್ ರೊಸಾರಿಯೊ ತಂಡದ ಉಪನಾಯಕರಾಗಿದ್ದಾರೆ.

ಅಕ್ಟೋಬರ್ 3ರಂದು ಮೊದಲ ಪಂದ್ಯದಲ್ಲಿ ರಾಜ್ಯ ತಂಡವು ಗುಜರಾತ್ ಎದುರು ಆಡಲಿದೆ.

ಸರ್ವಿಸಸ್ ಕಬಡ್ಡಿ ತಂಡಕ್ಕೆ ಜಯ: ಸರ್ವಿಸಸ್ ಪುರುಷರ ಕಬಡ್ಡಿ ತಂಡವು ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸತತ ಎರಡನೇ ಜಯ ಸಾಧಿಸಿತು. ಇದರೊಂದಿಗೆ ಸತತ ನಾಲ್ಕನೇ ಪ್ರಶಸ್ತಿ ಜಯದತ್ತ ಒಂದು ಹೆಜ್ಜೆ ಮುಂದಿಟ್ಟಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಸರ್ವಿಸಸ್ ಆಟಗಾರರು 45–31ರಿಂದ ತಮಿಳುನಾಡು ತಂಡವನ್ನು ಪರಾಭವಗೊಳಿಸಿದರು. ಮಹಾರಾಷ್ಟ್ರ ಮಹಿಳಾ ತಂಡವು ಎರಡನೇ ಜಯ ಸಂಪಾದಿಸಿತು. ಆ ತಂಡವು 46–22ರಿಂದ ಆತಿಥೇಯ ಗುಜರಾತ್ ಎದುರು ಗೆದ್ದಿತು.

ಕರ್ನಾಟಕ ಹಾಕಿ ತಂಡಗಳು: ಪುರುಷರು: ಎಸ್.ವಿ.ಸುನಿಲ್ (ನಾಯಕ), ಹರೀಶ ಮುತಗಾರ, ಪ್ರಣಾಮ್ ಗೌಡ ವೈ.ಎಂ, ಸೋಮಯ್ಯ ಕೆ.ಪಿ, ಅಭರಣ್ ಸುದೇವ್ ಬಿ, ಗಣೇಶ್, ನಾಗಶ್ರೀನು, ಎ.ಎಚ್. ದೀಕ್ಷಿತ್, ಪೃಥ್ವಿರಾಜ್ ಜಿ.ಎನ್, ಶರತ್ ಸೋಮಣ್ಣ (ಗೋಲುಕೀಪರ್), ಭರತ್ ಕೆ.ಆರ್, ಶೇಷೇಗೌಡ ಬಿ.ಎಂ, ಸೂರ್ಯ ಎನ್.ಎಂ, ಮೊಹಮ್ಮದ್ ರಾಹೀಲ್, ನಾಚಪ್ಪ ಐ. ಆರ್, ಜಗದೀಪ್ ದಯಾಳ್ (ಗೋಲುಕೀಪರ್), ನಿತಿನ್ ತಿಮ್ಮಯ್ಯ ಸಿ.ಎ., ಪುನೀತ್ ಆರ್. ಮ್ಯಾನೇಜರ್: ಎ.ಬಿ. ಸುಬ್ಬಯ್ಯ, ಕೋಚ್: ವಿನಯ್ ವಿ.ಎಸ್, ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್: ಬಸವರಾಜ್ ರಾಯಪ್ಪ ಡಿ.

ಮಹಿಳಾ ತಂಡ: ಕೃತಿಕಾ ಎಸ್.ಪಿ. (ನಾಯಕಿ), ಶ್ರಾವ್ಯಾ ಜಿ.ಬಿ (ಗೋಲು ಕೀಪರ್), ಅದಿರಾ ಎಸ್, ಹೇಮಾ ಅಶೋಕ್ ಹಪ್ಪಳಿ, ನಿಶಾ ಪಿ.ಸಿ, ಸಹನಾ ಸಿ.ಎಂ, ಪೂಜಿತಾ ಬಿ.ಎನ್, ಯಶಿಕಾ ಎಂ.ಜಿ, ಅಂಜಲಿ ಎಚ್.ಆರ್, ಕಾವ್ಯಾ ಕೆ.ಆರ್, ದೀಪ್ತಿ, ಲಿಖಿತಾ ಎಸ್.ಪಿ, ದೇಚಮ್ಮಾ, ಅರ್ಪಿತಾ ಪಿ.ಎನ್. (ಗೋಲು ಕೀಪರ್), ಜೀವಿತಾ ಬಿ.ಜಿ, ಚಂದನಾ ಜೆ, ಸೌಮ್ಯಶ್ರೀ ಎನ್.ಆರ್, ಪೂಜಾ ಎಂ.ಡಿ. ಮ್ಯಾನೇಜರ್: ಜಮುನಾ ಅನೂಪ್, ಕೋಚ್: ವರ್ಗೀಸ್ ಜಾನ್, ಸಹಾಯಕ ಕೋಚ್: ಸೋಮಣ್ಣ ಕೆ.ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.