ಟಿಟಿ: ಮಣಿಕಾ, ಅರ್ಚನಾಗೆ ಮುನ್ನಡೆ

ಪಂಚಕುಲಾ: ಅಂತರರಾಷ್ಟ್ರೀಯ ಆಟಗಾರ್ತಿ ಮಣಿಕಾ ಬಾತ್ರಾ ಮತ್ತು ಕರ್ನಾಟಕದ ಅರ್ಚನಾ ಕಾಮತ್ ಇಲ್ಲಿ ನಡೆಯುತ್ತಿರುವ 82ನೇ ರಾಷ್ಟ್ರೀಯ ಸೀನಿಯರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಮುನ್ನಡೆ ಸಾಧಿಸಿದರು.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಣಿಕಾ 13-11, 11-9, 11-5, 7-11, 11-3 ರಿಂದ ಕಾಜೋಲ್ ರಾಮಜಾಲಿ ವಿರುದ್ಧ ಜಯಿಸಿದರು. ಇದರೊಂದಿಗೆ 32ರ ಸುತ್ತಿಗೆ ಪ್ರವೇಶಿಸಿದರು.
ಕರ್ನಾಟಕದ ಅರ್ಚನಾ 13-15, 12-10, 11-9, 4-11, 13-11, 11-5 ರಿಂದ ಸ್ವಸ್ತಿಕಾ ಘೋಷ್ ವಿರುದ್ಧ ಗೆದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.