ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೀಶ್‌, ಉತ್ಕರ್ಷ್‌ಗೆ ಚಿನ್ನ

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಫ್ರೀಸ್ಟೈಲ್‌ ತಂಡಗಳಿಗೆ ಅಗ್ರಸ್ಥಾನ
Last Updated 7 ಸೆಪ್ಟೆಂಬರ್ 2022, 14:23 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಈಜುಪಟುಗಳು ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಎರಡನೇ ದಿನವೂ ಪಾರಮ್ಯ ಮುಂದುವರಿಸಿದರು.

ಗುವಾಹಟಿಯಲ್ಲಿ ಡಾ. ಜಾಕೀರ್ ಹುಸೇನ್ ಈಜುಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಅನೀಶ್ ಎಸ್‌. ಗೌಡ (1500 ಮೀ. ಫ್ರೀಸ್ಟೈಲ್‌), ಉತ್ಕರ್ಷ್‌ ಪಾಟೀಲ್‌ (200 ಮೀ. ಬ್ಯಾಕ್‌ಸ್ಟ್ರೋಕ್‌) ಚಿನ್ನ ಗೆದ್ದರು. ಶಿವ ಎಸ್‌. (200 ಮೀ. ಬ್ಯಾಕ್‌ಸ್ಟ್ರೋಕ್‌) ಬೆಳ್ಳಿ ಪದಕ ಜಯಿಸಿದರು.

ಮಹಿಳೆಯರ 4X100 ಮೀ. ಫ್ರೀಸ್ಟೈಲ್‌ನಲ್ಲಿ ಧೀನಿಧಿ ದೇಸಿಂಗು, ಶ್ರೀಚರಣಿ ತುಮು, ರುಜುಲಾ ಎಸ್‌. ಮತ್ತು ಲಿತೇಶಾ ಮಂದಣ್ಣ ಅವರಿದ್ದ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿತು. ಇದೇ ಸ್ಪರ್ಧೆಯಪುರುಷರ ವಿಭಾಗದಲ್ಲಿ ಸಂಭವ್ ಆರ್‌, ಪೃಥ್ವಿ ಎಂ, ಶಿವ ಎಸ್‌. ಮತ್ತು ಅನೀಶ್ ಅವರ ತಂಡ ಕಂಚು ಗೆದ್ದಿತು.

ಫಲಿತಾಂಶಗಳು: ಪುರುಷರು: 1500 ಮೀ. ಫ್ರೀಸ್ಟೈಲ್‌: ಅನೀಶ್ ಎಸ್‌. ಗೌಡ–1 (ಕರ್ನಾಟಕ), ಕಾಲ: 16 ನಿ. 8.84ಸೆ, ಶುಶ್ರೂತ್ ಕಾಪ್ಸೆ (ಆರ್‌ಎಸ್‌ಪಿಬಿ–2, ಅನುರಾಗ್ ಸಿಂಗ್‌ (ಉತ್ತರಪ್ರದೇಶ)–3.

200 ಮೀ. ಬ್ಯಾಕ್‌ಸ್ಟ್ರೋಕ್‌: ಉತ್ಕರ್ಷ್ ಸಂತೋಷ್ ಪಾಟೀಲ್‌ –1, ಕಾಲ: 2 ನಿ. 4.61ಸೆ, ಶಿವ ಎಸ್‌.–2 (ಇಬ್ಬರೂ ಕರ್ನಾಟಕ), ತನ್ಮಯ್ ದಾಸ್‌ (ಆರ್‌ಎಸ್‌ಪಿಬಿ)–3.

50 ಮೀ. ಫ್ರೀಸ್ಟೈಲ್‌: ಪವನ್ ಗುಪ್ತಾ (ಆರ್‌ಎಸ್‌ಪಿಬಿ)–1, ಕಾಲ: 23.43ಸೆ, ರುದ್ರಾಂಶ್ ಮಿಶ್ರಾ (ಎಸ್‌ಎಸ್‌ಸಿಬಿ)–2, ನಿಮಿಷ್‌ ಮುಲೆ (ಎಸ್‌ಎಸ್‌ಸಿಬಿ)–3.

4X100 ಮೀ. ಫ್ರೀಸ್ಟೈಲ್‌: ಎಸ್‌ಎಸ್‌ಸಿಬಿ–1, ಕಾಲ: 3 ನಿ. 29.88 ಸೆ, ತಮಿಳುನಾಡು–2, ಕರ್ನಾಟಕ–3

ಮಹಿಳೆಯರು: 400 ಮೀ. ಮೆಡ್ಲೆ: ರಿಚಾ ಮಿಶ್ರಾ (ಪೊಲೀಸ್‌)–1 , ಕಾಲ: 5 ನಿ. 12. 48 ಸೆ, ಶೃಂಗಿ ಬಾಂದೇಕರ್ (ಗೋವಾ)–2, ದಿಶಾ ಭಂಡಾರಿ (ಉತ್ತರ ಪ್ರದೇಶ)–3.

200 ಮೀ. ಬ್ಯಾಕ್‌ಸ್ಟ್ರೋಕ್‌: ಮಾನಾ ಪಟೇಲ್‌ (ಗುಜರಾತ್‌)–1, ಕಾಲ: 2 ನಿ. 20.9 ಸೆ., ಪಲಕ್ ಜೋಷಿ (ಮಹಾರಾಷ್ಟ್ರ)–2, ಪ್ರತಿಷ್ಠಾ ದಾಂಗಿ (ಮಹಾರಾಷ್ಟ್ರ)–3.

4X100 ಮೀ. ಫ್ರೀಸ್ಟೈಲ್‌: ಕರ್ನಾಟಕ–1, ಕಾಲ: 4 ನಿ. 3.73ಸೆ., ಮಹಾರಾಷ್ಟ್ರ–2, ತಮಿಳುನಾಡು–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT