ಶುಕ್ರವಾರ, ಏಪ್ರಿಲ್ 3, 2020
19 °C
ಕೊರೊನಾ ಪರಿಣಾಮ: ವಿದೇಶಿಯರಿಗೆ ಪ್ರವೇಶ ನಿರಾಕರಣೆ

ಭಾರತಕ್ಕೆ ಮರಳಲಿರುವ ನೀರಜ್‌, ಶಿವಪಾಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಟರ್ಕಿಯಲ್ಲಿ ತರಬೇತಿ ಪಡೆಯುತ್ತಿರುವ ಭಾರತದ ಜಾವೆಲಿನ್‌ ಥ್ರೋವರ್‌ ನೀರಜ್‌ ಚೋಪ್ರಾ ತವರಿಗೆ ಮರಳುತ್ತಿದ್ದಾರೆ. ಕೋವಿಡ್‌–19 ಪಿಡುಗಿನ ಕಾರಣ ಹಲವು ದೇಶಗಳ ರೀತಿ ಟರ್ಕಿ ಕೂಡ, ವಿದೇಶಿಗರಿಗೆ ಪ್ರವೇಶವನ್ನು ನಿರಾಕರಿಸಿದೆ.

22 ವರ್ಷದ ಚೋಪ್ರಾ ಒಂದು ತಿಂಗಳಿನಿಂದ ಟರ್ಕಿಯಲ್ಲಿ ತರಬೇತಿಯಲ್ಲಿದ್ದರು. ಹೋದ ವರ್ಷ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿದ್ದ ಅವರು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಸ್ಪರ್ಧೆಯ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಅಂದು ಅವರು 87.86 ಮೀ. ದೂರ ಜಾವೆಲಿನ್‌ ಎಸೆದಿದ್ದರು.

‘ಇದೇ 18ರಂದು ಟರ್ಕಿ ತನ್ನ ಗಡಿಯನ್ನು ಮುಚ್ಚಲಿದೆ. ಅದಕ್ಕೂ ಮೊದಲು ನೀರಜ್‌ ಭಾರತಕ್ಕೆ ಮರಳಬೇಕಾಗುತ್ತದೆ. ಬುಧವಾರ ಅವರು ಸ್ವದೇಶ ತಲುಪಲಿದ್ದಾರೆ. ಏಪ್ರಿಲ್‌ 17ರಂದು ನಡೆಯುವ ಡೈಮಂಗ್‌ ಲೀಗ್‌ ಟೂರ್ನಿಯ ದೋಹಾ ಲೆಗ್‌ನಲ್ಲೂ ಅವರು ಪಾಲ್ಗೊಳ್ಳುತ್ತಿಲ್ಲ’ ಎಂದು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ಮತ್ತೊಬ್ಬ ಜಾವೆಲಿನ್‌ ಎಸೆತಗಾರ, ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಶಿವಪಾಲ್‌ ಸಿಂಗ್‌ ಕೂಡ ದಕ್ಷಿಣ ಆಫ್ರಿಕಾದಲ್ಲಿನ ತರಬೇತಿ ಕೇಂದ್ರದಿಂದ ಸ್ವದೇಶಕ್ಕೆ ಮರಳುತ್ತಿದ್ದಾರೆ.

24 ವರ್ಷದ ಶಿವಪಾಲ್‌, ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 85.47 ಮೀ. ದೂರ ಜಾವೆಲಿನ್‌ ಎಸೆದು ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು