ಟೋಕಿಯೊ: ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮತ್ತೊಮ್ಮೆ ಮುಂದಕ್ಕೆ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಆಯೋಜಕರಿಗೆ ಇರುವುದು ಇದೊಂದೇ ಅವಕಾಶ...

ಹೀಗೆ ಖಡಾಖಂಡಿತವಾಗಿ ಹೇಳಿರುವುದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್. ಬಿಬಿಸಿ ಜೊತೆ ಮಾತನಾಡಿದ ಅವರು ಮುಂದಿನ ವರ್ಷವೂ ಕೊರೊನಾ ಹಾವಳಿ ಮುಂದುವರಿದರೆ ಕೂಟವನ್ನು ರದ್ದು ಮಾಡುವುದಾಗಿ ಜಪಾನ್ ಹೇಳಿದ್ದು ಅದಕ್ಕೆ ತಮ್ಮ ಸಹಮತ ಇದೆ ಎಂದರು.

ವಿಶ್ವದಾದ್ಯಂತ ಕೊರೊನಾ–19 ಅಟ್ಟಹಾಸಗೈಯಲು ಆರಂಭಿಸುತ್ತಿದ್ದಂತೆ ಒಲಿಂಪಿಕ್ಸ್ ಕೂಟವನ್ನುಮುಂದಿನ ವರ್ಷದ ಜುಲೈಗೆ ಮುಂದೂಡಲು ಮಾರ್ಚ್‌ನಲ್ಲಿ ನಿರ್ಧರಿಸಲಾಗಿತ್ತು.

‘ಜಪಾನ್‌ನ ಸದ್ಯದ ಪರಿಸ್ಥಿತಿ ನಮಗೆಲ್ಲ ಅರ್ಥವಾಗುತ್ತಿದೆ. ಮೂರು ಸಾವಿರದಿಂದ ಐದು ಸಾವಿರ ಮಂದಿಯನ್ನು ಒಳಗೊಂಡ ಆಯೋಜನಾ ಸಮಿತಿಯನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಪ್ರಪಂಚದ ವಿವಿಧ ಫೆಡರೇಷನ್‌ಗಳು ಕೂಡ ಪ್ರತಿವರ್ಷ ತಮ್ಮ ವೇಳಾಪಟ್ಟಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅನಿಶ್ಚಿತತೆ ಇದ್ದರೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳಿಗೂ ಹುಮ್ಮಸ್ಸು ಇರುವುದಿಲ್ಲ’ ಎಂದು ಅವರು ಹೇಳಿದರು.

ವಿಶ್ವಯುದ್ಧದ ಸಂದರ್ಭವನ್ನು ಹೊರತುಪಡಿಸಿದರೆ ಒಲಿಂಪಿಕ್ಸ್ ಕೂಟವನ್ನು ಎಂದೂ ರದ್ದು ಮಾಡಿಲ್ಲ. ಆದರೆ ಕೊರೊನಾ ಹಾವಳಿ ಮುಂದುವರಿದರೆ ಟೋಕಿಯೊ ಒಲಿಂಪಿಕ್ಸ್ ರದ್ದು ಮಾಡುವುದು ಖಚಿತ ಎಂದು ಜಪಾನ್ ಈಗಾಗಲೇ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.