ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಈಜು ಸ್ಪರ್ಧೆಗಳ ಆರಂಭ ಸದ್ಯಕ್ಕಿಲ್ಲ: ಎಸ್‌ಎಫ್‌ಐ

Last Updated 13 ಅಕ್ಟೋಬರ್ 2020, 12:36 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎಲ್ಲ ರಾಜ್ಯಗಳಲ್ಲೂ ಈಜುಕೊಳಗಳು ತರಬೇತಿಗೆ ಮುಕ್ತವಾಗುವವರೆಗೂ ರಾಷ್ಟ್ರೀಯ ಈಜು ಸ್ಪರ್ಧೆಗಳ ಪುನರಾರಂಭ ಸಾಧ್ಯವಿಲ್ಲ ಎಂದು ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಮಂಗಳವಾರ ಹೇಳಿದೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮಾರ್ಚ್‌ 24ರಿಂದ ಈಜುಕೊಳಗಳಲ್ಲಿ ತರಬೇತಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಳೆದ ತಿಂಗಳು, ಗೃಹ ಸಚಿವಾಲಯವು ಅಕ್ಟೋಬರ್ 15 ರಿಂದ ದೇಶದಾದ್ಯಂತ ಅಥ್ಲೀಟುಗಳ ತರಬೇತಿಗಾಗಿ ಈಜುಕೊಳಗಳನ್ನು ಮುಕ್ತವಾಗಿಸುವುದಾಗಿ ಪ್ರಕಟಿಸಿತ್ತು.

‘ಅಕ್ಟೋಬರ್‌ 15ರಿಂದ ದೇಶದಾದ್ಯಂತ ಈಜುಕೊಳಗಳು ತರಬೇತಿಗೆ ದೊರಕುವುದಿಲ್ಲ. ಒಂದು ಅಥವಾ ಎರಡು ಕಡೆ ಆಗಬಹುದಷ್ಟೇ. ಈಜುಕೊಳಗಳನ್ನು ಕ್ಲಬ್‌ಗಳು, ರಾಜ್ಯ ಸರ್ಕಾರಗಳು ನಿರ್ವಹಿಸುತ್ತಿವೆ. ಎಲ್ಲ ರಾಜ್ಯಗಳು ಒಪ್ಪಿಗೆ ನೀಡದೆ ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ನಡೆಸಲು ಸಾಧ್ಯವಿಲ್ಲ‘ ಎಂದು ಎಸ್‌ಎಫ್‌ಐ ಕಾರ್ಯಕಾರಿ ನಿರ್ದೇಶಕ ವೀರೇಂದ್ರ ನಾನಾವತಿ ಹೇಳಿದ್ದಾರೆ.

‘ಸ್ಪರ್ಧೆಗಳು ಆರಂಭವಾಗಲು ನಾಲ್ಕೈದು ತಿಂಗಳು ಕಾಯಬೇಕಾಗಬಹುದು‘ ಎಂದೂ ಅವರು ನುಡಿದರು.

ಕೋವಿಡ್‌ ತಡೆ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಮಾರ್ಗಸೂಚಿಗಳನ್ನು (ಎಸ್‌ಒಪಿ) ಉಲ್ಲಂಘಿಸುವ ಈಜುಪಟುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಸ್‌ಎಫ್‌ಐ ಎಚ್ಚರಿಸಿದೆ.

ಕೋಚ್‌ಗಳ ತರಬೇತಿ ಉದ್ದೇಶದಿಂದ ಆಸ್ಟ್ರೇಲಿಯಾದ ಕ್ರೀಡಾ ಶಿಕ್ಷಣ ಹಾಗೂ ಸಮಾಲೋಚನಾ ಕಂಪನಿ ಮೋರ್‌ಗೋಲ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಎಸ್‌ಎಫ್‌ಐ ಇದೇ ವೇಳೆ ಪ್ರಕಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT