ಸೋಮವಾರ, ಏಪ್ರಿಲ್ 19, 2021
32 °C

ರ‍್ಯಾಲಿ: ಗೌರವ್ ಗಿಲ್‌ಗೆ ಐಎನ್‌ಆರ್‌ಸಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಟ್ಟಯಂ (ಪಿಟಿಐ): ಭಾರತದ ಅಗ್ರಮಾನ್ಯ ರೇಸ್ ಚಾಲಕ ಗೌರವ್ ಗಿಲ್ ಅವರು ಭಾನುವಾರ ಇಲ್ಲಿ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದರು. ಗೌರವ್ ಗಿಲ್ ಅವರು ಸತತ ಐದನೇ ಸಲ ಈ ಸಾಧನೆ ಮಾಡಿದ್ದಾರೆ.

ಮಹೀಂದ್ರಾ ತಂಡದಲ್ಲಿರುವ ಗೌರವ್‌ ಅವರಿಗೆ ಜೆ.ಕೆ. ಟೈರ್‌ ಸಹಪ್ರಾಯೋಜಕತ್ವ ನೀಡಿದೆ. ಗೌರವ್ ಮತ್ತು ಅವರ ಸಹಚಾಲಕ ಮೂಸಾ ಶೆರಿಫ್ ಜೋಡಿಯು ಎಸ್‌ಎಸ್‌9 ವಿಭಾಗದಲ್ಲಿ ಜಯಿಸಿತು. ಇವರಿಬ್ಬರೂ ಎಸ್‌.ಎಸ್‌. 10 ಮತ್ತು ಎಸ್‌.ಎಸ್‌. 11 ವಿಭಾಗಗಳಲ್ಲಿ ದ್ವಿತೀಯರಾದರು.

ಗಿಲ್ ಅವರ ತಂಡದಲ್ಲಿರುವ ಡೀನ್ ಮೆಸಾದರೆನಸ್ ಮತ್ತು ಸುಹೇಮ್ ಕಬೀರ್ ಅವರು ಕೂಡ ಉತ್ತಮವಾಗಿ ಚಾಲನೆ ಮಾಡಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು