ಭಾನುವಾರ, ಜೂನ್ 26, 2022
25 °C

ಪ್ಯಾರಾ ಕೆನೊಯಿಂಗ್‌ ವಿಶ್ವಕಪ್‌: ಪ್ರಾಚಿ ಯಾದವ್‌ಗೆ ಕಂಚು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ಪ್ರಾಚಿ ಯಾದವ್‌ ಪ್ಯಾರಾ ಕೆನೊಯ್‌ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಇತಿಹಾಸ ಬರೆದಿದ್ದಾರೆ.

ಪೋಲೆಂಡ್‌ನ ಪೋಜ್ನಾನ್‌ನಲ್ಲಿ ನಡೆದ ಟೂರ್ನಿಯ ವಿಎಲ್2 200 ಮೀಟರ್ಸ್ ವಿಭಾಗದಲ್ಲಿ ಪದಕ ಜಯಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಪ್ರಾಚಿ 1 ನಿಮಿಷ 4.71 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಆಸ್ಟ್ರೇಲಿಯಾದ ಸುಸಾನ್‌ ಸೈಪೆಲ್‌ ( 1 ನಿ. 1.54 ಸೆ.) ಚಿನ್ನ ಗೆದ್ದರು. ಬೆಳ್ಳಿ ಪದಕವು ಕೆನಡಾದ ಬ್ರಿಯಾನ್ನಾ ಹೆನ್ನೆಸ್ಸಿ (1ನಿ. 1.58 ಸೆ.) ಅವರ ಪಾಲಾಯಿತು.

ಮನೀಷ್‌ ಕೌರವ್‌ (ಪುರುಷರ ಕೆಎಲ್‌3 200 ಮೀ.) ಮತ್ತು ಮಂಜೀತ್ ಸಿಂಗ್‌ (ವಿಎಲ್‌2 200 ಮೀ.) ಫೈನಲ್‌ ತಲುಪಿದ್ದಾರೆ.

ವಿಎಲ್‌3 200 ಮೀ. ವಿಭಾಗದ ಸೆಮಿಫೈನಲ್‌ನಲ್ಲಿ ಜೈದೀಪ್‌ ಸೋಲು ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು