ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕೊರತೆ

Last Updated 23 ಮಾರ್ಚ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಸರಘಟ್ಟ ಹೋಬಳಿ ದೊಡ್ಡಬ್ಯಾಲಕೆರೆ ಗ್ರಾಮದ ಉಪ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು, ಕಟ್ಟಡವನ್ನು ದುರಸ್ತಿ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಇಲ್ಲಿ ಕೇಂದ್ರ ಆರಂಭವಾಗಿ 20 ವರ್ಷಗಳು ಕಳೆದಿವೆ. ಕೇಂದ್ರಕ್ಕೆ ಸುಸಜ್ಜಿತ ಕೊಠಡಿ ಇಲ್ಲ. ವಾರದಲ್ಲಿ ಎರಡು ದಿನಗಳು ಮಾತ್ರ ವೈದ್ಯಕೀಯ ಸೇವೆ ಲಭ್ಯವಿದೆ. ಸುತ್ತಮತ್ತಲಿನ ಐದಾರು ಗ್ರಾಮಗಳ ಜನರು ಈ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದೇವೆ. ಆದರೆ, ಇಲ್ಲಿ ಪ್ರಾಥಮಿಕ ಸೌಲಭ್ಯಗಳು ಇಲ್ಲ’ ಎಂದು ಗ್ರಾಮದ ನಿವಾಸಿ ಸಂತೋಷ್ ದೂರಿದರು.

‘ಕಿಟಕಿಗಳು ಹಾಳಾಗಿವೆ. ಇಲ್ಲಿರುವ ಮರದ ಬೆಂಚು ಓಬಿರಾಯನ ಕಾಲದ್ದು. ಕಟ್ಟಡಕ್ಕೆ 20 ವರ್ಷಗಳಿಂದ ಸುಣ್ಣ ಹೊಡೆದಿಲ್ಲ. ಲಾರ್ವಾಹಾರಿ ಮೀನಿನ ತೊಟ್ಟಿಯಲ್ಲಿ ನೀರು ಇಲ್ಲ’ ಎಂದರು.

ಯಲಹಂಕ ವೈದ್ಯಾಧಿಕಾರಿ ರಮೇಶ್ ಬಾಬು, ಈ ಕೇಂದ್ರಕ್ಕೆ ಶೀಘ್ರದಲ್ಲಿ ಸೌಲಭ್ಯ ಒದಗಿಸಿಕೊಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT