ಸೋಮವಾರ, ಮೇ 16, 2022
22 °C
ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಪ್ರಿಯಾ ಮೋಹನ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಬೆಂಗಳೂರಿನ ಪ್ರಿಯಾ ಮೋಹನ್ ಅವರು ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 18 ವರ್ಷದೊಳಗಿನ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಅಸ್ಸಾಂ ಗುವಾಹಟಿಯಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಭಾನುವಾರ ಮಿಂಚಿದರು.

ಪ್ರಿಯಾ 55.29 ಸೆಕೆಂಡುಗಳಲ್ಲಿ ನಿಗದಿತ ಗುರಿ ಮುಟ್ಟಿದರು. 20 ವರ್ಷದೊಳಗಿನ ಪುರುಷರ 100 ಮೀ. ಓಟದಲ್ಲಿ ಅಭಿನ್ ದೇವಾಡಿಗ (10.78 ಸೆಕೆಂಡು) ಬೆಳ್ಳಿ ಪದಕ ಜಯಿಸಿದರು. ಈ ವಿಭಾಗದ ಚಿನ್ನವು ದೆಹಲಿಯ ರಿತಿಕ್ ಮಲಿಕ್‌ (10.76 ಸೆ.) ಪಾಲಾದರೆ, ಕಂಚಿನ ಪದಕವನ್ನು ಉತ್ತರ ಪ್ರದೇಶದ ರಾಹುಲ್ ಶರ್ಮಾ (10.89) ಗಳಿಸಿದರು.

20 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಎರಡು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 400 ಮೀ. ವಿಭಾಗದಲ್ಲಿ ಜ್ಯೋತಿಕಾ (56.71 ಸೆ.) ಹಾಗೂ ಹೈಜಂಪ್‌ನಲ್ಲಿ ಎಸ್‌.ಬಿ.ಸುಪ್ರಿಯಾ (1.65 ಮೀಟರ್ಸ್) ಎರಡನೇ ಸ್ಥಾನ ಗಳಿಸಿದರು.

14 ವರ್ಷದೊಳಗಿನ ಬಾಲಕಿಯರ 60 ಮೀ. ನಡಿಗೆ ಸ್ಪರ್ಧೆಯಲ್ಲಿ ಸಾನಿಕಾ ಸುಭಾಷ್ ಬಂಗೇರ ಕಂಚಿನ ಪದಕ ಗೆದ್ದುಕೊಂಡಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು