ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಪಟ್ನಾ ಪೈರೇಟ್ಸ್‌ ಜಯಭೇರಿ

Last Updated 14 ಅಕ್ಟೋಬರ್ 2018, 20:02 IST
ಅಕ್ಷರ ಗಾತ್ರ

ಸೋನೆಪತ್‌: ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಮೋತಿಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೋರಾಟದಲ್ಲಿ ಪ್ರದೀಪ್‌ ನರ್ವಾಲ್ ಸಾರಥ್ಯದ ಪಟ್ನಾ ತಂಡ 43–37 ಪಾಯಿಂಟ್ಸ್‌ನಿಂದ ಯು.ಪಿ.ಯೋಧಾ ವಿರುದ್ಧ ಗೆದ್ದಿತು.

ಪಟ್ನಾ ತಂಡದ ನಾಯಕ ಪ್ರದೀಪ್‌ 14 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ಯೋಧಾ ‍ಪರ ಶ್ರೀಕಾಂತ್‌ ಜಾಧವ್‌ ಮತ್ತು ರಿಷಾಂಕ್ ದೇವಾಡಿಗ ಕ್ರಮವಾಗಿ 17 ಮತ್ತು 11 ಪಾಯಿಂಟ್ಸ್‌ ಕಲೆಹಾಕಿದರು.

ಯೋಧಾ ತಂಡ ಆರಂಭದಲ್ಲಿ ಅಮೋಘ ಆಟ ಆಡಿ 3–1ರ ಮುನ್ನಡೆ ಗಳಿಸಿತ್ತು. ನಂತರವೂ ಮಿಂಚಿದ ಈ ತಂಡದವರು ಮುನ್ನಡೆಯನ್ನು 6–3ಕ್ಕೆ ಹೆಚ್ಚಿಸಿಕೊಂಡರು. ಎಂಟನೇ ನಿಮಿಷದಲ್ಲಿ ಪಟ್ನಾ 7–7ರ ಸಮಬಲ ಸಾಧಿಸಿತು. ನಂತರ ಪಾರಮ್ಯ ಮೆರೆದ ಪ್ರದೀಪ್ ಪಡೆ 16–10ರಿಂದ ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲೂ ಈ ತಂಡ ಛಲದಿಂದ ಹೋರಾಡಿ ಗೆಲುವಿನ ತೋರಣ ಕಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT