ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿ: ಎಂಟರ ಘಟ್ಟಕ್ಕೆ ಸಿಂಧು

Last Updated 25 ನವೆಂಬರ್ 2021, 10:38 IST
ಅಕ್ಷರ ಗಾತ್ರ

ಬಾಲಿ: ಭಾರತದ ‍ಪಿ.ವಿ. ಸಿಂಧು ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸಿಂಧು 21–12, 21–18 ರಿಂದ ಜರ್ಮನಿಯ 26ನೇ ರ‍್ಯಾಂಕ್‌ನ ಯುವನೆ ಲೀ ವಿರುದ್ಧ ಜಯಿಸಿದರು. ಹಾಲಿ ವಿಶ್ವ ಚಾಂಪಿಯನ್ ಆಗಿರುವ ಸಿಂಧು 37 ನಿಮಿಷಗಳ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.

ಮೊದಲ ಗೇಮ್‌ನಲ್ಲಿ ಸಿಂಧು ಎದುರಾಳಿಗೆ ಹೆಚ್ಚು ಅವಕಾಶಗಳನ್ನೇ ಕೊಡದಂತೆ ಪಾರಮ್ಯ ಮೆರೆದರು.ಆರಂಭದಲ್ಲಿಯೇ ಸತತ ಏಳು ಪಾಯಿಂಟ್‌ಗಳನ್ನು ಕಲೆಹಾಕಿದ ಸಿಂಧು ಮುನ್ನಡೆಯತ್ತ ದಾಪುಗಾಲಿಟ್ಟರು. ಅವರ ಚುರುಕಿನ ರಿಟರ್ನ್ ಮತ್ತು ನಿಖರ ಸರ್ವ್‌ಗಳ ಮುಂದೆ ಜರ್ಮನಿ ಆಟಗಾರ್ತಿ ಮಂಕಾದರು.

ಆದರೆ ಎರಡನೇ ಗೇಮ್‌ನಲ್ಲಿ ಲೀತುಸು ಪ್ರತಿರೋಧ ಒಡ್ಡಿದರು. ಆದರೆ ಜಯ ಒಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಸಿಂಧು ಜಯದತ್ತ ಮುನ್ನಡೆದರು.

ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್ ದೇಶದ ಬೀಟ್ರೀಜ್ ಕೊರಾಲೆಸ್ ಮತ್ತು ದಕ್ಷಿಣ ಕೊರಿಯಾದ ಸಿಮ್ ಯೂಜಿನಿ ಮುಖಾಮುಖಿಯಾಗಲಿದ್ದಾರೆ. ಇದರಲ್ಲಿ ಗೆದ್ದವರು ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧುಗೆ ಸವಾಲೊಡ್ಡುವರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿರುವ ಸಿಂಧು, ಈಚೆಗಷ್ಟೇ ಇಂಡೊನೇಷ್ಯಾ ಸೂಪರ್ 750 ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT