ಚೆನ್ನೈ: ಭಾರತ ಮೋಟರ್‌ಸ್ಪೋರ್ಟ್ಸ್ ಕ್ಲಬ್‌ಗಳ ಫೆಡರೇಷನ್ (ಎಫ್‌ಎಫ್‌ಎಸ್‌ಸಿಐ) ಅಧ್ಯಕ್ಷ ಜೆ.ಪೃಥ್ವಿರಾಜ್ ಮೇಲೆ ಹೇರಿದ್ದ ನಿಷೇಧವನ್ನು ಭಾರತೀಯ ಮೋಟರ್ ಸ್ಪೋರ್ಟ್ಸ್ ಮೇಲ್ಮನವಿ ಸಮಿತಿ (ಐಎಂಎಸ್‌ಎಸಿ) ಸೋಮವಾರ ಹಿಂತೆಗೆದುಕೊಂಡಿದೆ. ಹೋದ ವರ್ಷ ಜೋಧಪುರದಲ್ಲಿ ನಡೆದ ರ‍್ಯಾಲಿಯ ವೇಳೆ ಮೂವರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪೃಥ್ವಿರಾಜ್ ಮೇಲೆ ನಿಷೇಧ ಹೇರಲಾಗಿತ್ತು.

‘ನಿಷೇಧಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಪೃಥ್ವಿರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನುಐಎಂಎಸ್‌ಎಸಿ ಎತ್ತಿಹಿಡಿದಿದೆ. ಅವರ ಮೇಲಿದ್ದ ಹೇರಿದ್ದ ನಿಷೇಧವು ಸಾಮಾಜಿಕ ನ್ಯಾಯ ತತ್ವಗಳ ಉಲ್ಲಂಘನೆ ಎಂದು ಐಎಂಎಸ್‌ಎಸಿ ಹೇಳಿದೆ’ಎಂದು ಕೊಯಂಬತ್ತೂರ್ ಆಟೊ ಸ್ಪೋರ್ಟ್ಸ್ ಕ್ಲಬ್ ಹೇಳಿಕೆ ಬಿಡುಗಡೆ ಮಾಡಿದೆ.

‘ಇಂತಹ ದೊಡ್ಡ ಶಿಕ್ಷೆ ವಿಧಿಸುವ ಮುನ್ನ ಅವರಿಗೆ ಸಮರ್ಪಕ ನೋಟಿಸ್ ಜಾರಿ ಮಾಡಿಲ್ಲ’ ಎಂದು ಕ್ಲಬ್‌ನ ಹೇಳಿಕೆ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.