ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಶುಭಂಕರ್‌ ಪ್ರಿ ಕ್ವಾರ್ಟರ್‌ಗೆ

ರಷ್ಯ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಭಾರತದ ಐವರು 16ರ ಘಟ್ಟಕ್ಕೆ
Last Updated 17 ಜುಲೈ 2019, 19:46 IST
ಅಕ್ಷರ ಗಾತ್ರ

ವ್ಲಾಡಿವೊಸ್ತೊಕ್‌, ರಷ್ಯಾ: ಅಗ್ರಶ್ರೇಯಾಂಕದ ಶುಭಂಕರ್‌ ಡೇ ಮತ್ತು ರಿತುಪರ್ಣಾ ದಾಸ್‌ ಸೇರಿದಂತೆ ಭಾರತದ ಐವರು ಆಟಗಾರರು ರಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಶುಭಂಕರ್‌, ಹಿನ್‌ ಶುನ್‌ ವಾಂಗ್‌ ಎದುರು 21–10, 21–10 ಗೇಮ್‌ ಗಳಿಂದ ಗೆದ್ದರು. ಸಿರಿಲ್‌ ವರ್ಮಾ, ಸ್ಥಳೀಯ ಆಟಗಾರ ಸೆರ್ಜೆ ಸಿರಾಂಟ್‌ ವಿರುದ್ಧ 21–15, 12–21, 21–11ರಿಂದ ಗೆದ್ದರೆ, ರಾಹುಲ್‌ ಯಾದವ್‌ ಚಿತ್ತಬೊಯ್ನಾ ರಷ್ಯಾದ ಆ್ಯಂಟನ್‌ ಇವಾನೊವ್‌ ವಿರುದ್ಧ 21–15, 21–9ರಲ್ಲಿ ಗೆದ್ದರು.

ರಿತುಪರ್ಣಾ, ಸಿಂಗಪುರದ ಚುವಾ ಹ್ಯುಯ್‌ ಝೆನ್‌ ಗ್ರೇಸ್‌ ವಿರುದ್ಧ 21–12, 21–8ರಿಂದ ಗೆದ್ದರೆ, ವೃಷಾಲಿ, ಅಲಿನಾ ಕುರ್ಗುಜೊವಾ ಎದುರು 21–8, 21–9ರಿಂದ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT