ಗುರುವಾರ , ಅಕ್ಟೋಬರ್ 29, 2020
19 °C

ಹಾಕಿ: ಜಾನ್‌ ರಾಜೀನಾಮೆ ಅಂಗೀಕರಿಸಿದ ಸಾಯ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಥಾನಕ್ಕೆ ಡೇವಿಡ್‌ ಜಾನ್‌ ಅವರು ನೀಡಿದ್ದ ರಾಜೀನಾಮೆಯನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಮಂಗಳವಾರ ಅಂಗೀಕರಿಸಿದೆ.

ಭಾರತದಲ್ಲಿ ತೀವ್ರಗತಿಯಲ್ಲಿ ಏರುತ್ತಿರುವ ಕೋವಿಡ್‌–19 ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆಯನ್ನು ಉಲ್ಲೇಖಿಸಿ ಇದೇ ತಿಂಗಳ 18ರಂದು ಜಾನ್‌ ರಾಜೀನಾಮೆ ನೀಡಿದ್ದರು.

‘ಆರೋಗ್ಯದ ದೃಷ್ಟಿಯಿಂದ ಜಾನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ತಮ್ಮ ತವರು ಆಸ್ಟ್ರೇಲಿಯಾಕ್ಕೆ ಮರಳಲು ಬಯಸಿದ್ದಾರೆ‘ ಎಂದು ಸಾಯ್‌ ಹೇಳಿದೆ.

ಜಾನ್‌ ಅವರ ಒಪ್ಪಂದವನ್ನು ಒಂದು ವರ್ಷ ವಿಸ್ತರಿಸಿದ್ದರೂ ಹಾಕಿ ಇಂಡಿಯಾದ ಉನ್ನತ ಮಟ್ಟದ ಅಧಿಕಾರಿಗಳೊಡನೆ ಹೊಂದಿದ್ದ ಭಿನ್ನಾಭಿಪ್ರಾಯದ ಕಾರಣ ತಮ್ಮ ಹುದ್ದೆಯನ್ನು ತೊರೆದಿದ್ದಾರೆ ಎಂದು ಮೂಲಗಳು ಹೇಳಿದ್ದವು.

‘ಹಾಕಿ ಇಂಡಿಯಾದ ಕಡೆಗಣನೆಗೆ ಒಳಗಾಗಿದ್ದ ಜಾನ್‌ ಹತಾಶೆಗೊಂಡಿದ್ದರು. ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ಅವರನ್ನು ದೂರವಿರಿಸಲಾಗುತ್ತಿತ್ತು‘ ಎಂದು ಮೂಲಗಳು ತಿಳಿಸಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು