ಶನಿವಾರ, ಜುಲೈ 2, 2022
27 °C

ಟೇಬಲ್‌ ಟೆನಿಸ್‌: ಮುಖ್ಯ ಸುತ್ತಿಗೆ ಸಮ್ಯಕ್, ಆಕಾಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಆಟವಾಡಿದ ಕರ್ನಾಟಕದ ಸಮ್ಯಕ್ ಕಶ್ಯಪ್ ಹಾಗೂ ಆಕಾಶ್ ಕೆ.ಜೆ. ಅವರು ರಾಷ್ಟ್ರೀಯ ಜೂನಿಯರ್ ಹಾಗೂ ಯೂತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಯೂತ್ ಬಾಲಕರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸಮ್ಯಕ್‌ 11–8, 4–11, 9–11, 11–6, 11–5ರಿಂದ ತಮಿಳುನಾಡಿನ ದೀನ್‌ದಯಾಳ್ ವಿಶ್ವ ಅವರನ್ನು ಮಣಿಸಿದರು. ಜೂನಿಯರ್ ಬಾಲಕರ ವಿಭಾಗದಲ್ಲೂ ಸಮ್ಯಕ್ ಮುಖ್ಯ ಸುತ್ತಿಗೆ ಕಾಲಿಟ್ಟರು. ಈ ವಿಭಾಗದಲ್ಲಿ ಅವರು 11–7, 11–5, 11–5ರಿಂದ ಪಿಎಸ್‌ಪಿಬಿಎ ತಂಡದ ಲುಬಿತ್ ಮವಾರ್ ಅವರನ್ನು ಸೋಲಿಸಿದರು.

ಜೂನಿಯರ್ ಬಾಲಕರ ವಿಭಾಗದಲ್ಲಿ ಆಕಾಶ್ ಕೆ.ಜೆ 10–12, 13–11, 11–4, 11–9ರಿಂದ ಆಂಧ್ರಪ್ರದೇಶದ ವೆಂಕಟ ಕಾರ್ತಿಕೇಯ ಮನ್ನವ ಎದುರು ಗೆದ್ದರು. ಕರ್ನಾಟಕದ ಶ್ರೀಕಾಂತ್ ಪಿ.ವಿ. ಹಾಗೂ ರೋಹಿತ್ ಶಂಕರ್ ಕೂಡ ಈ ವಿಭಾಗದಲ್ಲಿ ಮುಖ್ಯ ಸುತ್ತಿಗೆ ಲಗ್ಗೆಯಿಟ್ಟರು.

ಶ್ರೀಕಾಂತ್‌ 11–6, 11–7, 7–11, 11–4ರಿಂದ ಮಿಜೋರಾಂನ ಎಂ.ಆರ್. ಥಾಂಗ್‌ಸಿಯಾನ್‌ಸಂಗಾ ಅವರನ್ನು ಪರಾಭವಗೊಳಿಸಿದರೆ, ರೋಹಿತ್‌ 11-8,8-11,11-3,11-7ರಿಂದ ಉತ್ತರಾಖಂಡದ ಮಿತ್ತಲ್ ಸಕ್ಷಮ್ ಎದುರು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು