ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ಕೋಚಿಂಗ್ ಹುದ್ದೆ ತೊರೆದ ಸಾಂಗ್‌

Last Updated 24 ಫೆಬ್ರವರಿ 2023, 22:30 IST
ಅಕ್ಷರ ಗಾತ್ರ

ನವದೆಹಲಿ : ಭಾರತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ತರಬೇತಿ ನೀಡುತ್ತಿದ್ದ ಕೊರಿಯಾದ ಪಾರ್ಕ್ ಟೆ ಸಾಂಗ್‌ ಕೋಚಿಂಗ್‌ನಿಂದ ಹಿಂದೆ ಸರಿದಿದ್ದಾರೆ.

ಇತ್ತೀಚಿನ ಟೂರ್ನಿಗಳಲ್ಲಿ ಸಿಂಧು ಅವರು ನಿರೀಕ್ಷಿತ ಸಾಮರ್ಥ್ಯ ತೋರಿರಲಿಲ್ಲ. ಅದರ ಹೊಣೆ ಹೊತ್ತು ತಾವು ಹುದ್ದೆ ತೊರೆಯುತ್ತಿರುವುದಾಗಿ ಪಾರ್ಕ್ ಶುಕ್ರವಾರ ಹೇಳಿದ್ದಾರೆ.

ಪಾರ್ಕ್ ಅವರ ಮಾರ್ಗದರ್ಶನದಲ್ಲಿ ಸಿಂಧು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದಿದ್ದರು. ಕಾಮನ್‌ವೆಲ್ತ್ ಕೂಟದಲ್ಲಿ ಪಾದದ ಗಾಯದಿಂದ ಬಳಲಿದ್ದ ಅವರು ಐದು ತಿಂಗಳು ವಿಶ್ರಾಂತಿ ಬಳಿಕ ಕಣಕ್ಕೆ ಮರಳಿದ್ದರು.

‘ಸಿಂಧು ಹೊಸ ಕೋಚ್‌ ಹುಡುಕಿಕೊಳ್ಳುವುದಾಗಿ ಹೇಳಿದ್ದಾರೆ. ನಾನು ಅವರ ನಿರ್ಧಾರವನ್ನು ಗೌರವಿಸುವೆ‘ ಎಂದು ಪಾರ್ಕ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT