ಚಿನ್ನಕ್ಕೆ ಮುತ್ತಿಕ್ಕಿದ ಸೆಮೆನ್ಯಾ

ಬುಧವಾರ, ಮೇ 22, 2019
29 °C
ದೋಹಾದಲ್ಲಿ ನಡೆದ ಡೈಮಂಡ್‌ ಲೀಗ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಚಿನ್ನಕ್ಕೆ ಮುತ್ತಿಕ್ಕಿದ ಸೆಮೆನ್ಯಾ

Published:
Updated:
Prajavani

ದೋಹಾ: ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮೆನ್ಯಾ, ಇಲ್ಲಿ ಶುಕ್ರವಾರ ನಡೆದ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಮಹಿಳೆಯರ 800 ಮೀಟರ್ಸ್‌ ಓಟದ ಸ್ಪರ್ಧೆಯ ಫೈನಲ್‌ನಲ್ಲಿ ಸೆಮೆನ್ಯಾ, ಒಂದು ನಿಮಿಷ 54.98 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಬುರುಂಡಿಯಾ ಫ್ರಾನ್ಸಿನ್‌ ನಿಯೊನ್‌ಸಬಾ ಬೆಳ್ಳಿಯ ಪದಕ ಪಡೆದರು. ಅವರು ಅಂತಿಮ ರೇಖೆ ಮುಟ್ಟಲು ಒಂದು ನಿಮಿಷ 57.75 ಸೆಕೆಂಡು ತೆಗೆದುಕೊಂಡರು. ಈ ವಿಭಾಗದ ಕಂಚಿನ ಪದಕ ಅಮೆರಿಕದ ಅಜೀ ವಿಲ್ಸನ್‌ ಅವರ ಪಾಲಾಯಿತು. ವಿಲ್ಸನ್‌, ಒಂದು ನಿಮಿಷ 58.83 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಸೆಮೆನ್ಯಾ ಅವರು 800 ಮೀಟರ್ಸ್‌ ವಿಭಾಗದಲ್ಲಿ ಭಾಗವಹಿಸಿದ ಕೊನೆಯ ಸ್ಪರ್ಧೆ ಇದಾಗಿತ್ತು.

ಮಹಿಳಾ ಅಥ್ಲೀಟ್‌ಗಳಲ್ಲಿ ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಐಎಎಎಫ್‌) ಹೊಸ ನಿಯಮವು ಮೇ 8ಕ್ಕೆ ಜಾರಿಯಾಗಲಿದೆ.

ಐಎಎಎಫ್‌ನ ಹೊಸ ನಿಯಮದಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿ ಸೆಮೆನ್ಯಾ, ಕ್ರೀಡಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅವರ ಮನವಿಯ ವಿರುದ್ಧ ನ್ಯಾಯಾಲಯವು ತೀರ್ಪು ನೀಡಿತ್ತು.

ಚಿಕಿತ್ಸೆಯ ಮೂಲಕ ಹಾರ್ಮೋನ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ‘ಖಂಡಿತವಾಗಿಯೂ ಅಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ’ ಎಂದು ಸೆಮೆನ್ಯಾ ಪ್ರತಿಕ್ರಿಯಿಸಿದ್ದಾರೆ.

‘ಮುಂದಿನ ಹಾದಿ ಯಾವುದು ಎಂಬುದು ನನಗಂತೂ ಗೊತ್ತಿಲ್ಲ. ಈ ವಿಷಯದಲ್ಲಿ ಯಾರ ಸಲಹೆಯನ್ನೂ ಕೇಳುವುದಿಲ್ಲ. ಅದರ ಅಗತ್ಯವೂ ನನಗಿಲ್ಲ. ನನ್ನನ್ನು ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ. ಅವರಿಗಾಗಿಯೇ ಬದುಕುತ್ತಿದ್ದೇನೆ. ನನ್ನೆಲ್ಲಾ ಸಾಧನೆಗೆ ಅವರೇ ಸ್ಫೂರ್ತಿ. ಮುಂದೆ ಏನೇ ಸಮಸ್ಯೆ ಬಂದರೂ  ದಿಟ್ಟತನದಿಂದಲೇ ಎದುರಿಸುತ್ತೇನೆ’ ಎಂದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !