ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಶರತ್‌ ದಾಖಲೆ ಅರ್ಚನಾಗೆ ಪ್ರಶಸ್ತಿ

Last Updated 9 ಜನವರಿ 2019, 20:16 IST
ಅಕ್ಷರ ಗಾತ್ರ

ಕಟಕ್‌: ಕಮಲೇಶ್ ಮೆಹ್ತಾ ಅವರ ಸದೀರ್ಘ ಕಾಲದ ದಾಖಲೆಯನ್ನು ಮುರಿದ ಅಚಂತಾ ಶರತ್ ಕಮಲ್, ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತನೇ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.

ಪಿಎಸ್‌ಪಿಬಿಯನ್ನು ಪ್ರತಿನಿಧಿಸಿದ ಶರತ್‌ ಬುಧವಾರ ಇಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಅದೇ ಸಂಸ್ಥೆಯ ಸತ್ಯನ್ ಅವರನ್ನು 11-13, 11-5, 11-6, 5-11, 10-12, 11-6, 14-12ರಿಂದ ಮಣಿಸಿದರು.

ಯುವ ಆಟಗಾರ್ತಿ ಅರ್ಚನಾ ಕಾಮತ್‌ ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪಿಎಸ್‌ಪಿಬಿಯನ್ನು ಪ್ರತಿನಿಧಿಸಿದ ಅವರು ಫೈನಲ್‌ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಕೃತ್ವಿಕಾ ಸಿನ್ಹಾ ರಾಯ್‌ ಎದುರು 12-10, 6-11, 11-9, 12-10, 7-11, 11-3ರಿಂದ ಗೆದ್ದರು.

ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಶರತ್‌, ಮಾನವ್ ಠಕ್ಕರ್ ಎದುರು ಮತ್ತು ಸತ್ಯನ್‌, ರೋನಿತ್ ಭಂಜಾ ಎದುರು ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಅರ್ಚನಾ ಕಾಮತ್‌, ಮಣಿಕಾ ಭಾತ್ರಾ ಎದುರು ಮತ್ತು ಕೃತ್ವಿಕಾ ರಾಯ್‌, ಅಹಿಹಿಕಾ ಮುಖರ್ಜಿ ಎದುರು ಗೆದ್ದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT