ಸೋಮವಾರ, ಸೆಪ್ಟೆಂಬರ್ 26, 2022
22 °C

ಎಫ್‌ಐಎಮ್‌ ಮಿನಿ ಗ್ರ್ಯಾನ್‌ ಪ್ರಿ ವಿಶ್ವ ಸಿರೀಸ್‌ಗೆ ಶ್ರೇಯಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕರ್ನಾಟಕದ ಶ್ರೇಯಸ್‌ ಹರೀಶ್‌ ಅವರು ಎಫ್‌ಐಎಮ್‌ ಮಿನಿ ಗ್ರ್ಯಾನ್‌ ಪ್ರಿ ವಿಶ್ವ ಸಿರೀಸ್‌ ಫೈನಲ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಬೆಂಗಳೂರಿನ ಶ್ರೇಯಸ್‌, ನ್ಯಾಷನಲ್ ಸಿರೀಸ್‌ನಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ನವೆಂಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯುವ ಟೂರ್ನಿಗೆ ಆಯ್ಕೆಯಾದರು. ಐದು ವಾರಗಳ ಕಾಲ ನಡೆದ ಐದು ಮೋಟರ್‌ ರೇಸ್‌ಗಳ ಪೈಕಿ ನಾಲ್ಕರಲ್ಲಿ ಶ್ರೇಯಸ್‌ ಜಯ ಗಳಿಸಿದರು.

ರಾಷ್ಟ್ರೀಯ ಸಿರೀಸ್‌ನಲ್ಲಿ ಶ್ರೇಯಸ್‌ ಒಟ್ಟು 220 ಪಾಯಿಂಟ್ಸ್ ಗಳಿಸಿದರು. ಜಿನೇಂದ್ರ ಕಿರಣ್‌ ಸಂಗಾವೆ (213) ಮತ್ತು ನಂದನನ್‌ ಮಹೇಂದ್ರನ್‌ (153) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.