ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಿಮ್ನಾಸ್ಟಿಕ್ಸ್‌: ಬೈಲ್ಸ್ ಗೈರು

Last Updated 19 ಅಕ್ಟೋಬರ್ 2021, 18:44 IST
ಅಕ್ಷರ ಗಾತ್ರ

ಕಿಟಾಕಿಯುಷು, ಜಪಾನ್ (ಎಎಫ್‌ಪಿ): ಅಮೆರಿಕದ ಜಿಮ್ನಾಸ್ಟಿಕ್ಸ್ ತಾರೆ ಸಿಮೊನ್ ಬೈಲ್ಸ್‌ ಇದೇ ವಾರ ಇಲ್ಲಿ ನಡೆಯಲಿರುವ ವಿಶ್ವ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಅದರಿಂದಾಗಿ ಉದಯೋನ್ಮುಖ ಜಿಮ್ನಾಸ್ಟ್‌ಗಳಿಗೆ ಮಿಂಚುವ ಅವಕಾಶ ಸಿಗಲಿದೆ.

ಸದ್ಯ ಬೈಲ್ಸ್ ಅವರು ‘ಗೋಲ್ಡ್ ಅಕ್ರಾಸ್ ಅಮೆರಿಕಾ’ ರಾಜಲ್–ಡಾಜಲ್ ಜಿಮ್ನಾಸ್ಟಿಕ್ಸ್‌ ಸ್ಟೇಜ್ ಷೋಗಳಲ್ಲಿ ನಿರತರಾಗಿದ್ದಾರೆ.

ಒಲಿಂಪಿಕ್ ಆಲ್‌ರೌಂಡ್ ಚಾಂಪಿಯನ್ ಸುನಿಸಾ ಲೀ ‘ಡಾನ್ಸಿಂಗ್ ವಿಥ್ ದ ಸ್ಟಾರ್ಸ್‘ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ಅವರೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವುದಿಲ್ಲ.

ಆದರೆ ಈ ಖ್ಯಾತನಾಮರ ಗೈರುಹಾಜರಿಯಿಂದಾಗಿ ಯುವಪ್ರತಿಭೆಗಳಿಗೆ ಅವಕಾಶ ಲಭಿಸಿದೆ. 18 ವರ್ಷದ ಲಿನ್ ವಾಂಗ್, ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. 17 ವರ್ಷದ ಕೈಲಾ ಡಿಸೆಲೊ ಮೂರನೇ ಸ್ಥಾನ ಪಡೆದರು.

ಬೈಲ್ಸ್ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ 19 ಚಿನ್ನದ ಪದಕಗಳನ್ನು ಗೆದ್ದಿರುವ ದಾಖಲೆ ಹೊಂದಿದ್ದಾರೆ. ಅವರು ಅಗ್ರಶ್ರೇಯಾಂಕದಲ್ಲಿದ್ದಾರೆ. ಆದರೆ ಈ ಬಾರಿ ಹಿಂದೆ ಸರಿದಿರುವುದರಿಂದ ಅಗ್ರಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT