ಬುಧವಾರ, ಏಪ್ರಿಲ್ 1, 2020
19 °C

ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ವಿರುದ್ಧ ಸೋನಮ್‌ಗೆ ಸತತ 2ನೇ ಜಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಖನೌ: ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಅವರನ್ನು ಕಳೆದ 2 ತಿಂಗಳಿಂದೀಚೆಗೆ ಸತತ ಎರಡು ಬಾರಿ ಮಣಿಸಿದ ಯುವ ಕುಸ್ತಿಪಟು ಸೋನಮ್‌ ಮಲಿಕ್‌, ಮುಂದಿನ ತಿಂಗಳು ನಡೆಯಲಿರುವ ಏಷ್ಯನ್‌ ಒಲಿಂಪಿಕ್ಸ್‌ ಕುಸ್ತಿ ಕ್ವಾಲಿಫೈಯರ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡವನ್ನು ಕೂಡಿಕೊಂಡರು.

‌ಇತ್ತೀಚೆಗೆ ಮುಕ್ತಾಯವಾದ ರೋಂ ರ‍್ಯಾಂಕಿಂಗ್‌ಸಿರೀಸ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ತೋರಲು ವಿಫಲವಾಗಿದ್ದ 18ವರ್ಷ ಸೋನಮ್‌ ಅವರಿಗೆ, ಮತ್ತೊಮ್ಮೆ 62ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಸೂಚಿಸಲಾಗಿತ್ತು.

ಸೋನಮ್‌ ಅವರು, ಸಾಕ್ಷಿ ವಿರುದ್ಧ ಸೆಣಸುವುದಕ್ಕೂ ಮೊದಲು ಏಷ್ಯನ್‌ ಚಾಂಪಿಯನ್‌ಷಿಪ್‌ ಚಿನ್ನ ಪದಕ ವಿಜೇತೆ ಸರೀತಾ ಮೊರ್‌ ಅವರನ್ನು 3–1 ಅಂತರದಿಂದ ಮಣಿಸಿದ್ದರು.

ಏಷ್ಯನ್‌ ಒಲಿಂಪಿಕ್‌ ಕ್ವಾಲಿಫೈಯರ್ಸ್‌ ಟೂರ್ನಿಯು ಮಾರ್ಚ್‌ 27 ರಿಂದ 29ರವರೆಗೆ ಕಿರ್ಗಿಸ್ತಾನದ ಬಿಷೆಕ್‌ನಲ್ಲಿ ನಡೆಯಲಿದೆ. ಇದರಲ್ಲಿ ಫೈನಲ್‌ ಪ್ರವೇಶಿಸಿದವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.

2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪೂಜಾ ಧಂಡ ಸೇರಿದಂತೆ ಒಂಬತ್ತು ಮಂದಿ ಕುಸ್ತಿಪಟುಗಳು 62 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದರು.


ಹಣಾಹಣಿಯೊಂದರಲ್ಲಿ ಎದುರಾಳಿಯನ್ನು ಚಿತ್‌ ಮಾಡಲು ಮೇಲೆತ್ತಿರುವ ಸೋನಮ್‌ ಮಲಿಕ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು