ಬ್ಯಾಂಕಾಕ್ : ಥಾಮಸ್ ಕಪ್ ಟೂರ್ನಿಯಲ್ಲಿಐತಿಹಾಸಿಕ ವಿಜಯ ಸಾಧಿಸಿದ ಉತ್ಸಾಹದಲ್ಲಿರುವ ಭಾರತದ ಕಿದಂಬಿ ಶ್ರೀಕಾಂತ್ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ. ಆದರೆ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಎಡವಿದರು.

ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್, ಬುಧವಾರ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಜಿದ್ದಾಜಿದ್ದಿನ ಪಂದ್ಯದಲ್ಲಿ 18–21, 21–10, 21–16ರಿಂದ ಫ್ರಾನ್ಸ್ನ ಬ್ರೈಸ್ ಲೆವರ್ಡೆಜ್ ವಿರುದ್ಧ ಗೆದ್ದರು.

ಮುಂದಿನ ಪಂದ್ಯದಲ್ಲಿ ಶ್ರೀಕಾಂತ್ ಅವರಿಗೆ, ಐರ್ಲೆಂಡ್ನ ನ್ಯಾಟ್ ಎನ್ಗುಯೆನ್ ಸವಾಲು ಎದುರಾಗಿದೆ.

ಲಂಡನ್ಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ 21–17, 15–21, 17–21ರಿಂದ ಕೊರಿಯಾದ ಕಿಮ್ ಗಾ ಯುನ್ ಎದುರು ಪರಾಭವಗೊಂಡರು. ಮೊದಲ ಗೇಮ್ ಸುಲಭವಾಗಿ ಜಯಿಸಿದ ಭಾರತದ ಆಟಗಾರ್ತಿ, ನಂತರದ ಎರಡು ಗೇಮ್ಗಳನ್ನು ಕೈಚೆಲ್ಲಿದರು.

ಮಾಳವಿಕಾ ಬನ್ಸೋದ್17-21, 21-15, 21-11ರಿಂದ ಉಕ್ರೇನ್ನ ಮರಿಯಾ ಯುಲ್ಟಿನಾ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರೆ, ಆಕರ್ಷಿ ಕಶ್ಯಪ್ 10–21, 15–21ರಿಂದ ಥಾಯ್ಲೆಂಡ್ನ ರಚನೊಕ್ ಇಂತನನ್ ವಿರುದ್ಧ ಎಡವಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಬಿ. ಸುಮೀತ್ ರೆಡ್ಡಿ– ಅಶ್ವಿನಿ ಪೊನ್ನಪ್ಪ ಕೂಡ ಮೊದಲ ಪಂದ್ಯದಲ್ಲೇ ನಿರಾಸೆ ಅನುಭವಿಸಿದರು. ಈ ಜೋಡಿಯು17-21, 17-21 ಜಪಾನ್ನ ಯೂಕಿ ಕನೆಕೊ– ಮಿಸಾಕಿ ಮತ್ಸುಟೊಮೊ ವಿರುದ್ಧ ಮಣಿದರು.

ಬಿ.ಸಾಯಿ ಪ್ರಣೀತ್ ಮತ್ತು ಸೌರಭ್ ವರ್ಮಾ ಕೂಡ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಸೋಲು ಕಂಡರು. ಪ್ರಣೀತ್12-21, 13-21ರಿಂದ ಥಾಯ್ಲೆಂಡ್ನ ಕಾಂತಫೋನ್ ವಾಂಗ್ಚೆರೊನ್ ಎದುರು, ಸೌರಭ್20-22, 12-21ರಿಂದ ಫ್ರಾನ್ಸ್ನ ತೋಮಾ ಜೂನಿಯರ್ ಪಾಪೊವ್ ಎದುರು ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.