ಮಂಗಳವಾರ, ಡಿಸೆಂಬರ್ 6, 2022
21 °C

ಧಾರವಾಡದಲ್ಲಿ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್: ಸಂಕೇತ್, ರಿಷ್ಯಾ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಧಾರವಾಡದ ಸಂಕೇತ ಎಸ್. ಮಾನೆ ಹಾಗೂ  ಬೆಂಗಳೂರು ದಕ್ಷಿಣದ ರಿಷ್ಯಾ ಗುರುವಾರ ಆರಂಭವಾದ ರಾಜ್ಯ ಮಟ್ಟದ ಶಾಲಾ ಜಿಮ್ನಾಸ್ಟಿಕ್ಸ್‌ನಲ್ಲಿ ಕ್ರಮವಾಗಿ 14 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅವರು ರಾಷ್ಟ್ರಮಟ್ಟದ ಸ್ಪರ್ಧೆಗೂ ಆಯ್ಕೆಯಾದರು.  

ಧಾರವಾಡದ ಸಮೃದ್ಧ ಹಿರೇಗೌಡರ, ವಿನಾಯಕ ಭಡಣಕಾರ, ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್‌.ಕೆ.ಅನೀಶ್, ಬೆಂಗಳೂರು ನಗರ ಜಿಲ್ಲೆಯ ಜಿ. ಭಾರ್ಗ, ಮೈಸೂರಿನ ಕೆ. ಅರ್ಪಿತ್, ತುಮಕೂರಿನ ಕೆ.ಎಸ್.ಜೀವನ್ ಆಯ್ಕೆಯಾದರು.

ಬಾಲಕರ ವಿಭಾಗದಲ್ಲಿ 171 ಅಂಕಗಳೊಂದಿಗೆ ಧಾರವಾಡ ಪ್ರಥಮ, 118 ಅಂಕಗಳೊಂದಿಗೆ ತುಮಕೂರು ತೃತೀಯ ಹಾಗೂ 101 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ 45.75 ಅಂಕಗಳೊಂದಿಗೆ ಧಾರವಾಡ ಪ್ರಥಮ, ಬೆಂಗಳೂರು ದಕ್ಷಿಣ 42.6 ಅಂಕಗಳೊಂದಿಗೆ ದ್ವಿತೀಯ ಹಾಗೂ ತುಮಕೂರು 23.82 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿತು.

ಫಲಿತಾಂಶ: ಬಾಲಕರು: ಫ್ಲೋರ್ ಎಕ್ಸಸೈಸ್‌: ಸಂಕೇತ್ ಎಸ್. ಮಾನೆ (ಧಾರವಾಡ; 14.4 ಪಾಯಿಂಟ್)–1, ಸಮೃದ್ಧ ಹಿರೇಗೌಡರ (ಧಾರವಾಡ –11.75)–2,  ಜಿ. ಭಾರ್ಗ (ಬೆಂಗಳೂರು; 11.65)–3. 

ಪೊಮೆಲ್ಡ್‌ : ಎಸ್.ಕೆ. ಅನೀಶ್ (ಬೆಂಗಳೂರು ದಕ್ಷಿಣ; 8.65)–1, ಸಂಕೇತ್ ಎಸ್. ಮಾನೆ (ಧಾರವಾಡ; 8.05)–2, ಸಮೃದ್ಧ ಹಿರೇಗೌಡರ (ಧಾರವಾಡ; 6.15)–3. 

ರೋಮನ್ ರಿಂಗ್ಸ್: ಸಮೃದ್ಧ ಹಿರೇಗೌಡರ (9.7)–1, ಸಂಕೇತ ಎಸ್. ಮಾನೆ (9.05)–2,ಅರ್ಪಿತ್ ಕಲಾಗುಡಿ (ಮೈಸೂರು; 7.2)–3.

ಟೇಬಲ್ ವಾಲ್ಟ್‌:  ಎಸ್.ಕೆ.ಅನೀಶ (10.8)–1, ಸಂಕೇತ ಮಾನೆ (10.5)–2, ಕೆ. ಅರ್ಪಿತ್ (10)–3

ಪ್ಯಾರಲಲ್ ಬಾರ್‌: ಸಮೃದ್ಧ ಹಿರೇಗೌಡರ (12.1)–1, ಸಂಕೇತ ಮಾನೆ (12)–2,  ಕೆ. ಅರ್ಪಿತ (8.05)–3. ಹಾರಿಜಾಂಟಲ್ ಬಾರ್: ಸಮೃದ್ಧ ಹಿರೇಗೌಡರ (4.75)–1, ಸಂಕೇತ ಮಾನೆ (3.9)–2, ಎಸ್.ಕೆ.ಅನೀಶ್ (1.6)–3.

‌ಬಾಲಕಿಯರು:  ಫ್ಲೋರ್ ಎಕ್ಸಸೈಸ್:  ಕೆ. ರಿಷ್ಯಾ (ಬೆಂಗಳೂರು ದಕ್ಷಿಣ; 11.95)–1.  ಅನುಷಾ ಕುಂಬಾರ (ಧಾರವಾಡ; 9.85)–2, ಐಶ್ವರ್ಯ ಅಮ್ಮಿನಭಾವಿ (ಧಾರವಾಡ; 5.5)–3.

ಬ್ಯಾಲೆನ್ಸಿಂಗ್ ಭೀಮ್‌: ಅನುಷಾ ಕುಂಬಾರ (10.25)–1, ಕೆ. ರಿಷ್ಯಾ (10.05) –2, ಐಶ್ವರ್ಯ ಅಮ್ಮಿನಭಾವಿ (8.75)–3.  ಅನ್‌ಈವನ್ ಬಾರ್‌: ಕೆ. ರಿಷ್ಯಾ (10.4)–1, ಅನುಷಾ ಕುಂಬಾರ (1)–2, ರಂಜನಿ (ತುಮಕೂರು; 0.5)–3 ಟೇಬಲ್ ವಾಲ್ಟ್‌: ಕೆ.ರಿಷ್ಯಾ (10.22)–1, ಎಸ್. ಜನನಿ (ತುಮಕೂರು; 8.52)–2, ಅನುಷಾ ಕುಂಬಾರ (5.22) –3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು