ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಆಕಾಶ್‌ಗೆ ಪ್ರಶಸ್ತಿ ‘ಡಬಲ್‌’

ರಾಜ್ಯ ರ‍್ಯಾಂಕಿಂಗ್ ಟೂರ್ನಿ: ದೇಶ್ನಾ ವಂಶಿಕಾ, ಸಹನಾ ಮೂರ್ತಿಗೂ ಗರಿ
Last Updated 14 ಸೆಪ್ಟೆಂಬರ್ 2021, 16:58 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯುತ್ತಮ ಸಾಮರ್ಥ್ಯ ತೋರಿದ ಆಕಾಶ್‌ ಕೆ.ಜೆ. ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು. ಬಾಲಕರ 17 ವರ್ಷದೊಳಗಿನ ಹಾಗೂ 19 ವರ್ಷದೊಳಗಿನವರ ವಿಭಾಗಗಳಲ್ಲಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇಲ್ಲಿಯ ಮಲ್ಲೇಶ್ವರಂ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದವು.

ಬಾಲಕಿಯರ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿಯು ಸಹನಾ ಎಚ್‌. ಮೂರ್ತಿ ಅವರಿಗೆ ಒಲಿದರೆ, 19 ವರ್ಷದೊಳಗಿನವರ ವಿಭಾಗದಲ್ಲಿ ದೇಶ್ನಾ ಎಂ. ವಂಶಿಕಾ ಪ್ರಶಸ್ತಿಗೆ ಮುತ್ತಿಕ್ಕಿದರು.

17 ವರ್ಷದೊಳಗಿನವರ ಬಾಲಕರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಆಕಾಶ್‌ 6–11, 11–4, 12–10, 11–4, 9–11, 11–7ರಿಂದ ಪಿ.ವಿ.ಶ್ರೀಕಾಂತ್ ಕಶ್ಯಪ್ ಅವರ ಸವಾಲು ಮೀರಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಆಕಾಶ್‌ 11-7,11-6, 12 -10, 9-11, 5 -11, 11-9ರಿಂದ ಸಮ್ಯಕ್‌ ಕಶ್ಯಪ್ ಅವರನ್ನು ಪರಾಭವಗೊಳಿಸಿದರೆ, ಶ್ರೀಕಾಂತ್ ಕಶ್ಯಪ್‌ 8–11, 11–7, 11–4, 11–6, 7–11, 11–8ರಿಂದ ರೋಹಿತ್‌ ಶಂಕರ್‌ ಎದುರು ಗೆದ್ದಿದ್ದರು.

19 ವರ್ಷದೊಳಗಿವರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಆಕಾಶ್‌ 11–6, 11–7, 8–11, 11–8, 11–2ರಿಂದ ಸಮ್ಯಕ್‌ ಕಶ್ಯಪ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಆಕಾಶ್‌ ಅವರು ರೋಹಿತ್ ಶಂಕರ್ ಎದುರು 6 -11, 12-10, 10-12, 11-7, 10-12, 13 -11, 11-7ರಿಂದ ಜಯ ಸಾಧಿಸಿದರೆ, ಸಮ್ಯಕ್‌ 11-3, 11-8, 11-9, 8-11, 11-7ರಿಂದ ಶ್ರೀಕಾಂತ್ ಕಶ್ಯಪ್ ಅವರನ್ನು ಮಣಿಸಿದ್ದರು.

17 ವರ್ಷದೊಳಗಿನ ಬಾಲಕಿಯರ ಜಿದ್ದಾಜಿದ್ದಿ ಪೈಪೋಟಿಯ ಫೈನಲ್‌ನಲ್ಲಿ ಸಹನಾ 11-5, 11-9,13-11, 8-11, 9-11, 10-12, 11-9ರಿಂದ ಕರುಣಾ ಜಿ. ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದಲ್ಲಿ ಸಹನಾ 8-11, 11-9,11- 6, 4-11, 11-5, 11-8ರಿಂದ ಶ್ವೇತಾ ಪಿ.ಎಂ. ಎದುರು, ಕರುಣಾ 10-12, 12-10, 8-11, 11- 13, 12- 10, 11-7,13-11ರಿಂದ ತೃಪ್ತಿ ಪುರೋಹಿತ್ ಎದುರು ಗೆದ್ದಿದ್ದರು.

19 ವರ್ಷದೊಳಗಿನ ಬಾಲಕಿಯರ ಫೈನಲ್‌ನಲ್ಲಿ ದೇಶ್ನಾ ಅವರು ಕರುಣಾ ಅವರನ್ನು 11-9, 13-11, 12-10, 11-8ರಿಂದ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ದೇಶ್ನಾ 9-11, 3 -11, 11- 6, 11-8, 11-9, 11-6ರಿಂದ ಅನರ್ಘ್ಯಾ ಮಂಜುನಾಥ್ ಎದುರು, ಕರುಣಾ 10–12, 11–6, 11–7, 11–7,11–3ರಿಂದ ಕಲ್ಯಾಣಿ ಅವರನ್ನು ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT